ADVERTISEMENT

ಇನ್‌ಸ್ಟಾಗ್ರಾಂ, ಟ್ವಿಟರ್‌ ಪೋಸ್ಟ್ ಡಿಲೀಟ್‌: ಅಭಿಮಾನಿಗಳಿಗೆ ಶಾಕ್ ನೀಡಿದ ದೀಪಿಕಾ

​ಪ್ರಜಾವಾಣಿ ವಾರ್ತೆ
Published 1 ಜನವರಿ 2021, 15:12 IST
Last Updated 1 ಜನವರಿ 2021, 15:12 IST
ದೀಪಿಕಾ
ದೀಪಿಕಾ   

ಹೊಸ ವರ್ಷದ ಮೊದಲ ದಿನವಾದ ಇಂದು ಬಾಲಿವುಡ್‌ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಅದೇನೆಂದರೆ ಅವರು ತಮ್ಮ ಇನ್‌ಸ್ಟಾಗ್ರಾಂ ಹಾಗೂ ಟ್ವಿಟರ್‌ನಲ್ಲಿರುವ ಎಲ್ಲಾ ಪೋಸ್ಟ್‌ಗಳನ್ನು ಡಿಲಿಟ್ ಮಾಡಿದ್ದಾರೆ.

ಇದರಿಂದ ಹಲವರು ಶಾಕ್‌ ಆಗಿದ್ದಾರೆ, ಅಲ್ಲದೇ ದೀಪಿಕಾ ಅಕೌಂಟ್ ಹ್ಯಾಕ್ ಆಗಿರಬಹುದು ಎಂದು ಯೋಚಿಸಿದ್ದಾರೆ. ಶುಕ್ರವಾರ ಈ ನಟಿ ಆಡಿಯೊ ಡೈರಿ ವೇದಿಕೆಯ ಮೂಲಕ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ತಿಳಿಸಿದ್ದರು. ಆ ಆಡಿಯೊ ಸಂದೇಶದಲ್ಲಿ ‘ಎಲ್ಲರಿಗೂ ನಮಸ್ಕಾರ, ನನ್ನ ಆಡಿಯೊ ಡೈರಿಗೆ ಸ್ವಾಗತ. ಇದು ನನ್ನ ಯೋಚನೆ ಹಾಗೂ ಭಾವನೆಗಳನ್ನು ಹಂಚಿಕೊಳ್ಳುವ ವೇದಿಕೆ. 2020ನೇ ವರ್ಷ ಎಲ್ಲರಿಗೂ ಅನಿಶ್ಚಿತತೆ ಕಾಡಿತ್ತು. ಆದರೆ ನಾನು ನಿಜಕ್ಕೂ ಕಳೆದ ವರ್ಷಕ್ಕೆ ಧನ್ಯವಾದ ಸಮರ್ಪಿಸುತ್ತೇನೆ. 2021ಕ್ಕೆ ನನಗೂ ಹಾಗೂ ಎಲ್ಲರಿಗೂ ಉತ್ತಮ ಆರೋಗ್ಯ ಹಾಗೂ ನೆಮ್ಮದಿ ಸಿಗಲಿ ಎಂದು ಆಶಿಸುತ್ತೇನೆ. ಹ್ಯಾಪಿ ನ್ಯೂ ಇಯರ್’ ಎಂದಿದ್ದಾರೆ.

ಕನ್ನಡದ ಈ ಬೆಡಗಿ ಟ್ವಿಟರ್‌ನಲ್ಲಿ 27.7 ಮಿಲಿಯನ್ ಫಾಲೋವರ್ಸ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ 52.5 ಫಾಲೋವರ್ಸ್‌ ಹೊಂದಿದ್ದಾರೆ.

ADVERTISEMENT

ಸದ್ಯ ಪತಿ ರಣವೀರ್ ಸಿಂಗ್‌ ಜೊತೆ ಸಮಯ ಕಳೆಯುತ್ತಿದ್ದಾರೆ ದೀಪಿಕಾ.

ಇನ್ನು ಶಕುನ್ ಭಾತ್ರ ನಿರ್ದೇಶನದ ಸಿದ್ಧಾರ್ಥ್ ಚತುರ್ವೇದಿ ಹಾಗೂ ಅನನ್ಯಾ ಪಾಂಡೆ ನಟನೆಯ ಸಿನಿಮಾದಲ್ಲಿ ದೀಪಿಕಾ ನಟಿಸುತ್ತಿದ್ದಾರೆ. ಅವರ ನಟನೆಯ 83 ಸಿನಿಮಾ ಬಿಡುಗಡೆ ಸಿದ್ಧವಾಗಿದ್ದು ಅದರಲ್ಲಿ ಕಪಿಲ್ ದೇವ್‌ ಪತ್ನಿ ರೋಮಿ ಭಾಟಿಯಾ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ ಈ ನಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.