ADVERTISEMENT

ಆಸ್ಪತ್ರೆಯಲ್ಲಿ ದೀಪಿಕಾ,ರಣವೀರ್‌: ಸಿಹಿ ಸುದ್ದಿ ಕೊಡಬಹುದೇ? ಅಭಿಮಾನಿಗಳ ನಿರೀಕ್ಷೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಆಗಸ್ಟ್ 2021, 14:43 IST
Last Updated 1 ಆಗಸ್ಟ್ 2021, 14:43 IST
ದೀಪಿಕ–ರಣವೀರ್‌
ದೀಪಿಕ–ರಣವೀರ್‌   

ಮುಂಬೈ: ಸ್ಟಾರ್‌ ದಂಪತಿ ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್‌ ಹಿಂದೂಜಾ ಆಸ್ಪತ್ರೆಯಲ್ಲಿ ಶನಿವಾರ ಕಾಣಿಸಿಕೊಂಡಿರುವುದುಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.

ದೀಪಿಕಾ ಗರ್ಭಿಣಿ ಆಗಿರುಬಹುದು ಎಂಬುದುಅಭಿಮಾನಿಗಳ ನಿರೀಕ್ಷೆಯಾಗಿದೆ. ಅದಕ್ಕೆ ಸತಿ–ಪತಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಎಂದು ಅಭಿಮಾನಿಗಳು ಅಂದಾಜಿಸಿದ್ದಾರೆ.ಬೇಗನೇ ಸಿಹಿ ಸುದ್ದಿ ನೀಡಿ ಎಂದು ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ.

ಹಿಂದೂಜಾ ಆಸ್ಪತ್ರೆಯಿಂದ ಮರಳಿ ಬರುವಾಗ ಇಬ್ಬರ ಮುಖದಲ್ಲಿ ಸಂಭ್ರಮ ಮನೆ ಮಾಡಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಜೋಡಿ ಶೀಘ್ರವೇ ಸಿಹಿ ಸುದ್ದಿ ಕೊಡಲಿದ್ದಾರೆ ಎಂಬ ಮಾತುಗಳು ಬಾಲಿವುಡ್‌ ಅಂಗಳದಲ್ಲಿ ಕೇಳಿಬರುತ್ತಿವೆ.

ADVERTISEMENT

ಇಬ್ಬರು ಹಿಂದೂಜಾ ಆಸ್ಪತ್ರೆಗೆ ಭೇಟಿ ನೀಡಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ದೀಪಿಕಾ ಗರ್ಭಿಣಿ ಎನ್ನುವ ಸುದ್ದಿ ಹರಿದಾಡುತ್ತಿರುವುದು ಇದೇ ಮೊದಲಲ್ಲ. 2019ರಲ್ಲೂ ದೀಪಿಕಾ ಗರ್ಭಿಣಿ, ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಆಗ ದೀಪಿಕಾ, ನಡೆಯಬೇಕಾದ್ದು ಕಾಲಕ್ಕೆ ಸರಿಯಾಗಿ ನಡೆಯುತ್ತದೆ ಎಂದು ಹೇಳಿದ್ದರು.

ದೀಪಿಕಾ ಮತ್ತು ರಣವೀರ್‌ ಪರಸ್ಪರ ಪ್ರೀತಿಸಿ 2018ರಲ್ಲಿ ಮದುವೆಯಾದರು. 2013ರಲ್ಲಿ 'ರಾಮ್ ಲೀಲಾ' ಸಿನಿಮಾದಲ್ಲಿ ಇಬ್ಬರು ಒಟ್ಟಿಗೆ ತೆರೆ ಹಂಚಿಕೊಂಡಿದ್ದರು. ಈ ಸಿನಿಮಾದಲ್ಲೇ ರಣವೀರ್‌ಗೆ ದೀಪಿಕಾ ಮೇಲೆ ಪ್ರೀತಿ ಹುಟ್ಟಿತ್ತು ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.