ADVERTISEMENT

ಅಬುಧಾಬಿ ಟೂರಿಸಂ ಜಾಹೀರಾತಿನಲ್ಲಿ ಹಿಜಾಬ್ ಧರಿಸಿ ಕಾಣಿಸಿಕೊಂಡ ನಟಿ ದೀಪಿಕಾ: ವಿವಾದ

ಪಿಟಿಐ
Published 9 ಅಕ್ಟೋಬರ್ 2025, 3:10 IST
Last Updated 9 ಅಕ್ಟೋಬರ್ 2025, 3:10 IST
<div class="paragraphs"><p>ಅಬುಧಾಬಿ ಟೂರಿಸಂ ಜಾಹೀರಾತಿನಲ್ಲಿ ಹಿಜಾಬ್ ಧರಿಸಿ ಕಾಣಿಸಿಕೊಂಡ ನಟಿ ದೀಪಿಕಾ: ವಿವಾದ</p></div>

ಅಬುಧಾಬಿ ಟೂರಿಸಂ ಜಾಹೀರಾತಿನಲ್ಲಿ ಹಿಜಾಬ್ ಧರಿಸಿ ಕಾಣಿಸಿಕೊಂಡ ನಟಿ ದೀಪಿಕಾ: ವಿವಾದ

   

ನವದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್‌ ದೇಶದ ಅಬುಧಾಬಿ ಸಿಟಿಯ ಪ್ರವಾಸೋದ್ಯಮದ ಜಾಹೀರಾತಿನಲ್ಲಿ ನಟಿ ದೀಪಿಕಾ ಪಡುಕೋಣೆ ಅವರು ಹಿಜಾಬ್‌ ಧರಿಸಿ ಕಾಣಿಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.

ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ನಟಿ ದೀಪಿಕಾ ಜಾಹೀರಾತಿನ ವಿಡಿಯೊವನ್ನು ಹಂಚಿಕೊಂಡಿದ್ದರು. ವಿಡಿಯೊದಲ್ಲಿ ನಟ ಹಾಗೂ ದೀಪಿಕಾ ಪತಿ ರಣವೀರ್ ಸಿಂಗ್ ಅವರೂ ಸಹ ಇದ್ದಾರೆ.

ADVERTISEMENT

ಅಬುಧಾಬಿ ಸಿಟಿಯ ಪ್ರವಾಸೋದ್ಯಮ ಆಕರ್ಷಣೆಯ ಭಾಗವಾಗಿ ದೀಪಿಕಾ ಹಾಗೂ ರಣವೀರ್ ಅಬುಧಾಬಿಯ ಶೇಖ್ ಜಾಯೆದ್ ಗ್ರ್ಯಾಂಡ್ ಮಸೀದಿಗೆ ಭೇಟಿ ನೀಡಿರುತ್ತಾರೆ. ಈ ವೇಳೆ ದೀಪಿಕಾ ಕೆಂಪು ಬಣ್ಣದ ಹಿಜಾಬ್ ಧರಿಸಿ ಕಾಣಿಸಿಕೊಂಡಿದ್ದರು.

ವಿಡಿಯೊದಲ್ಲಿ ಶೇಖ್ ಜಾಯೆದ್ ಗ್ರ್ಯಾಂಡ್ ಮಸೀದಿ ಸೇರಿದಂತೆ ಅಬುಧಾಬಿ ಸಿಟಿಯ ಪ್ರವಾಸೋದ್ಯಮದ ಆಕರ್ಷಣೆಗಳ ಬಗ್ಗೆ ಹೇಳುತ್ತಾರೆ.

ದೀಪಿಕಾ ಹಿಜಾಬ್ ಧರಿಸಿರುವ ಬಗ್ಗೆ ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಪರ–ವಿರೋಧದ ಚರ್ಚೆಗಳು ನಡೆಯುತ್ತಿವೆ.

ಈ ಹಿಂದೆ 2015ರಲ್ಲಿ ದೀಪಿಕಾ ಮೈ ಚಾಯ್ಸ್‌ ಎಂಬ ಅಭಿಯಾನ ನಡೆಸಿ ಸುದ್ದಿಯಾಗಿದ್ದರು, ‘ನನ್ನ ಉಡುಗೆ, ನನ್ನ ಊಟ ನನ್ನ ಇಷ್ಟಗಳು‘ ಎಂದು ಸುದ್ದಿಯಾಗಿದ್ದರು. ಪ್ರಸ್ತುತ ಆ ವಿಡಿಯೊವನ್ನು ಅನೇಕರು ದೀಪಿಕಾಗೆ ಟ್ಯಾಗ್‌ ಮಾಡಿ ‘ವೇರ್ ಇಸ್ ಯುವರ್ ಚಾಯ್ಸ್’? ಎಂದು ಪ್ರಶ್ನಿಸಿದ್ದಾರೆ.

‘ನೀವೊಬ್ಬ ನಕಲಿ ಮಹಿಳಾವಾದಿ, ನಿಮ್ಮ ಇಷ್ಟದ ಪ್ರಕಾರ ಬಟ್ಟೆ ಹಾಕುವುದಾದರೆ ಅಬುದಾಬಿಯಲ್ಲಿ ಅರಬ್ ಸಂಸ್ಕೃತಿ ಪ್ರಚಾರ ಮಾಡುವ ಹಿಜಾಬ್ ಧರಿಸಿ ಬೇರೆಯವರ ಮೇಲೆ ಪ್ರಭಾವ ಬೀರುವುದು ಏಕೆ? ಹಿಂದೂ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾಗ ಈ ರೀತಿ ಸಂಸ್ಕೃತಿ ಪ್ರತಿಬಿಂಬಿಸಿಸುವ ಉಡುಗೆ ತೊಡುವುದಿಲ್ಲವಲ್ಲ ಎಂದು ಪ್ರಶ್ನಿಸಿದ್ದಾರೆ.

ಇನ್ನೂ ಕೆಲವರು, ಹಿಂದೂ ಸಂಪ್ರದಾಯಗಳನ್ನು ದೀಪಿಕಾ ಈ ರೀತಿ ಪ್ರಚಾರ ಮಾಡುವುದಿಲ್ಲವಲ್ಲ ಎಂದು ಪ್ರಶ್ನಿಸಿದ್ದಾರೆ.

ದೀಪಿಕಾ ನಡೆಯನ್ನು ಕೆಲವರು ಸಮರ್ಥಿಸಿಕೊಂಡಿದ್ದಾರೆ. ಅಲ್ಲಿನ ಸಂಸ್ಕೃತಿಯನ್ನು ತೋರಿಸಿದರೆ ಏನು ತಪ್ಪು? ಎಂದು ಕೇಳಿದ್ದಾರೆ. ಇತ್ತೀಚೆಗೆ ದೀಪಿಕಾ ಪಡುಕೋಣೆ ಅವರನ್ನು ಸ್ಪಿರೀಟ್ ಚಿತ್ರದಿಂದ ತೆಗೆದು ಹಾಕಿದ್ದು ಸುದ್ದಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.