ADVERTISEMENT

‘ದೇಹಿ’ ಕೋಲ್ಕತ್ತಾ ಚಿತ್ರೋತ್ಸವಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 16:34 IST
Last Updated 17 ಸೆಪ್ಟೆಂಬರ್ 2019, 16:34 IST
‘ದೇಹಿ’ ಚಿತ್ರದಲ್ಲಿ ಕಿಶೋರ್‌
‘ದೇಹಿ’ ಚಿತ್ರದಲ್ಲಿ ಕಿಶೋರ್‌   

ಬೆಂಗಳೂರು: ಕಿಶೋರ್ ಅಭಿನಯದ ‘ದೇಹಿ’ ಕನ್ನಡ ಚಲನಚಿತ್ರ ಕೋಲ್ಕತ್ತಾದಲ್ಲಿ ಇದೇ 21 ರಿಂದ ನಡೆಯುವ ‘ಇಂಟರ್‌ ನ್ಯಾಷನಲ್‌ ಆರ್ಟ್‌ ಹೌಸ್‌ ಫಿಲಂ ಫೆಸ್ಟಿವಲ್‌’ನಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ.

ಭಾರತದ ಪ್ರಾಚೀನ ಸಮರ ಕಲೆ ಕಳರಿ ಪಯಟ್ಟು ಆಧುನಿಕ ಭಾರತದಲ್ಲಿ ಮಹಿಳೆಯರ ಆತ್ಮರಕ್ಷಣೆಯ ಸಾಧನವಾಗಿರುವ ಕಥಾ ವಸ್ತುವನ್ನು ಈ ಚಿತ್ರ ಹೊಂದಿದೆ. ಬೆಂಗಳೂರಿನ ‘ಕಳರಿ ಗುರುಕುಲಂ’ನ ಪ್ರಧಾನ ಪೋಷಕ ರಂಜನ್‌ ಮುಲ್ಲಾರಟ್ ಚಿತ್ರದ ನಿರ್ಮಾಪಕರು. ಧನಾ ಈ ಚಿತ್ರದ ನಿರ್ದೇಶಕರಾಗಿದ್ದು, ನೋಬಿನ್‌ ಪಾಲ್‌ ಸಂಗೀತ ನೀಡಿದ್ದಾರೆ.

ಈ ಚಿತ್ರದಲ್ಲಿ ಸಮರ ಕಲೆಯ ನಿರಂತರ ಅಭ್ಯಾಸದ ಮೂಲಕ ವ್ಯಕ್ತಿಯ ದೇಹ ಮತ್ತು ಮನಸ್ಸಿನ ಸಮತೋಲನ ಹೇಗೆ ಕಾಪಾಡಿಕೊಳ್ಳಬಹುದು ಎಂಬುದನ್ನು ವಿವರಿಸಲಾಗಿದೆ. ಕಮರ್ಷಿಯಲ್‌ ಚಿತ್ರಗಳಲ್ಲಿ ಸಮರ ಕಲೆಯನ್ನು ವೈಭವೀಕರಿಸಲಾಗುತ್ತದೆ. ಇಲ್ಲಿ ಅದರ ವೈಭವೀಕರಣ ಮಾಡಿಲ್ಲ. ದೇಹ ಮತ್ತು ಮನಸ್ಸಿನ ಲಹರಿಯನ್ನು ಸಮನ್ವಯತೆ ಸಾಧಿಸುವ ಸಾಧನವಾಗಿದೆ ಎಂಬುದನ್ನು ಚಿತ್ರದಲ್ಲಿ ಬಿಂಬಿಸಲಾಗಿದೆ ಎಂದು ರಂಜನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.