ADVERTISEMENT

ಬಾಲಿವುಡ್‌ ಬೆಡಗಿಯರಿಗೆ ಗಾಳ!

Velimai

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2019, 19:30 IST
Last Updated 15 ಡಿಸೆಂಬರ್ 2019, 19:30 IST
ತಲಾ ಅಜಿತ್‌, ತಮಿಳು ನಟ
ತಲಾ ಅಜಿತ್‌, ತಮಿಳು ನಟ   

ಕಾಲಿವುಡ್‌ ಸ್ಟಾರ್‌ ತಲಾ ಅಜಿತ್‌ ಅಭಿನಯದ ಬಹುನಿರೀಕ್ಷಿತ ‘ವಲಿಮೈ’ ಸಿನಿಮಾದ ಚಿತ್ರೀಕರಣಕ್ಕಾಗಿ ಸಿದ್ಧತೆಗಳು ಭರದಿಂದ ಸಾಗಿವೆ.‘ನೇರಕೊಂಡ ಪರವೈ’ ಚಿತ್ರದಲ್ಲಿ ಒಂದಾಗಿದ್ದ ನಿರ್ದೇಶಕ ಎಚ್‌. ವಿನೋತ್‌ ಮತ್ತು ಅಜಿತ್‌ ಮತ್ತೊಮ್ಮೆ ‘ವಲಿಮೈ’ ಚಿತ್ರದ ಮೂಲಕ ಮಿಂಚಲಿದ್ದಾರೆ.

ಚಿತ್ರೀಕರಣಕ್ಕೆ ದಿನಾಂಕ ನಿಗದಿಯಾಗಿದ್ದರೂ, ಅಜಿತ್‌ಗೆ ಹೀರೊಯಿನ್‌ ಯಾರು ಎನ್ನುವ ಪ್ರಶ್ನೆ ಹಾಗೆಯೇ ಉಳಿದಿದೆ. ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ ಸೇರಿದಂತೆ ಇತರೆ ಭಾಷೆಯ ನಟಿಯರು ದಕ್ಷಿಣದ ಸಿನಿಮಾಗಳತ್ತ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ಅದೇ ರೀತಿ ಅಜಿತ್‌ ಜೋಡಿಯಾಗಿ ಬಾಲಿವುಡ್‌ನ ಟಾಪ್‌ ನಟಿಯರನ್ನು ಕರೆತರುವ ಯೋಜನೆ ಚಿತ್ರತಂಡದ್ದು. ಹೈದರಾಬಾದ್‌ನರಾಜಮೌಳಿ ಫಿಲ್ಮಸಿಟಿಯಲ್ಲಿ ನಡೆಯಲಿರುವ ಚಿತ್ರೀಕರಣದಲ್ಲಿ ಅಜಿತ್‌ ಪಾತ್ರವನ್ನು ಮಾತ್ರ ಶೂಟ್‌ ಮಾಡಲಾಗುತ್ತಿದೆ.

ಇತ್ತೀಚೆಗೆ ಅಜಿತ್‌ ಗಿರಿಜಾ ಮೀಸೆ ಲುಕ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಬಹುಶಃ ‘ವಲಿಮೈ’ ಚಿತ್ರದಲ್ಲಿ ಅಜಿತ್‌ ಲುಕ್‌ ಇಂಥದೇ ಆಗಿರಬಹುದೆಂಬ ಲೆಕ್ಕಾಚಾರ ಅಭಿಮಾನಿಗಳದ್ದು. ಆದರೆ, ಈವರೆಗೆ ಚಿತ್ರದಲ್ಲಿ ಅಜಿತ್‌ ಲುಕ್‌ ವಿವರ ಎಲ್ಲೂ ಬಹಿರಂಗವಾಗಿಲ್ಲ. ಚಿತ್ರದಲ್ಲಿ ದೊಡ್ಡ ಕಲಾವಿದರ ಪಡೆಯೇ ಇರಲಿದೆ ಎಂಬ ಮಾತುಗಳಿವೆ. ಸಂಗೀತ ನಿರ್ದೇಶಕರಾಗಿ ಯುವನ್‌ ಶಂಕರ್‌ ರಾಜಾ ಮತ್ತು ಸಿನಿಮಾಟೋಗ್ರಾಫರ್‌ ಆಗಿ ನೀರವ್‌ ಶಾ ಕೈ ಜೋಡಿಸಿದ್ದಾರೆ.

ADVERTISEMENT

ಈ ಹಿಂದೆ ನಿರ್ದೇಶಕ ಎಚ್‌.ವಿನೋತ್ ಹಾಗೂ ಅಜಿತ್‌ ಜೋಡಿ ‘ನೇರಕೊಂಡ ಪರವೈ’ ಚಿತ್ರದ ಮೂಲಕ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದಿತ್ತು. ಇದೀಗ ಮತ್ತೊಮ್ಮೆ ಜೊತೆಯಾಗಿದ್ದಾರೆ. ‘ವಲಿಮೈ’ ಸಿನಿಮಾ ‘ನೇರಕೊಂಡ ಪರವೈ’ ರೆಕಾರ್ಡ್‌ ಮುರಿಯಲಿದೆಎಂದು ಚಿತ್ರತಂಡ ನಿರೀಕ್ಷೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.