
ಪ್ರಜಾವಾಣಿ ವಾರ್ತೆ
ಬೆಂಗಳೂರು: ನಟ ದರ್ಶನ್ ನಟನೆಯ ಡಿ.11ರಂದು ತೆರೆಕಂಡಿದ್ದ ಪ್ರಕಾಶ್ ವೀರ್ ನಿರ್ದೇಶನದ ದಿ ಡೆವಿಲ್ ಸಿನಿಮಾಕ್ಕೆ ಪೈರಸಿ ಸಮಸ್ಯೆ ಎದುರಾಗಿದೆ.
ಈವರೆಗೂ 10,500ಕ್ಕೂ ಅಧಿಕ ಪೈರಸಿ ಲಿಂಕ್ ತೆಗೆದಿರುವುದಾಗಿ ಚಿತ್ರನಿರ್ಮಾಣ ಸಂಸ್ಥೆ ಶ್ರೀ ಜೈ ಮಾತಾ ಕಂಬೈನ್ಸ್ ತಿಳಿಸಿದೆ. ‘ಈ ಪೈಕಿ ಇನ್‌ಸ್ಟಾ ಗ್ರಾಂನಲ್ಲಿ 4 ಸಾವಿರಕ್ಕೂ ಅಧಿಕ, ಯೂಟ್ಯೂಬ್‌ನಲ್ಲಿ 2 ಸಾವಿರಕ್ಕೂ ಅಧಿಕ ಹಾಗೂ ಟೆಲಿಗ್ರಾಂನಲ್ಲಿ 200ಕ್ಕೂ ಅಧಿಕ ಲಿಂಕ್‌ಗಳಿದ್ದವು. ಪೈರಸಿ ವಿರುದ್ಧ ನಾವು ಯುದ್ಧ ಮಾಡುತ್ತಲೇ ಇದ್ದೇವೆ’ ಎಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.