ADVERTISEMENT

ನಾಳೆ ‘ದಿ ಡೆವಿಲ್‌’ ಸಿನಿಮಾ ಬಿಡುಗಡೆ: ಇಡೀ ತಂಡಕ್ಕೆ ಶುಭ ಹಾರೈಸಿದ ರಿಷಬ್ ಶೆಟ್ಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಡಿಸೆಂಬರ್ 2025, 7:44 IST
Last Updated 10 ಡಿಸೆಂಬರ್ 2025, 7:44 IST
<div class="paragraphs"><p>ನಟ ದರ್ಶನ್,&nbsp;ರಿಷಬ್ ಶೆಟ್ಟಿ</p></div>

ನಟ ದರ್ಶನ್, ರಿಷಬ್ ಶೆಟ್ಟಿ

   

ನಟ ದರ್ಶನ್ ಅಭಿನಯದ ‘ದಿ ಡೆವಿಲ್’ ಸಿನಿಮಾ ನಾಳೆ ಅಂದರೆ ಡಿಸೆಂಬರ್ 11ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಹೀಗಾಗಿ ಅಭಿಮಾನಿಗಳು ನಟ ದರ್ಶನ್‌ ಅವರನ್ನು ದೊಡ್ಡ ಪರದೆ ಮೇಲೆ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.

ಮತ್ತೊಂದು ಕಡೆ ನಟ ದರ್ಶನ್ ಹಾಗೂ ದಿ ಡೆವಿಲ್‌ ಇಡೀ ತಂಡಕ್ಕೆ ರಿಷಬ್‌ ಶೆಟ್ಟಿ ಅವರು ಶುಭ ಹಾರೈಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ದಿ ಡೆವಿಲ್‌ ಪೋಸ್ಟರ್ ಅನ್ನು ಹಂಚಿಕೊಂಡು ‘ದರ್ಶನ್ ಸರ್ ಮತ್ತು ಇಡೀ ಡೆವಿಲ್ ಚಿತ್ರತಂಡಕ್ಕೆ ಅಭಿನಂದನೆಗಳು. ಡೆವಿಲ್ ಬ್ಲಾಕ್‌ಬಸ್ಟರ್ ರಿಲೀಸ್ ಆಗಲಿ. ತೆರೆ ಮೇಲೆ ಪ್ರಜ್ವಲಿಸಲಿ’ ಎಂದು ಬರೆದುಕೊಂಡಿದ್ದಾರೆ.

ADVERTISEMENT

‌ಇತ್ತೀಚೆಗೆ ದಿ ಡೆವಿಲ್‌ ಸಿನಿಮಾ ಟ್ರೇಲರ್ ಬಿಡುಗಡೆಯಾಗಿತ್ತು. ಟ್ರೇಲರ್‌ನಲ್ಲಿ ಹಿಂದೆಂದೂ ಕಾಣಿಸದ ಲುಕ್​ನಲ್ಲಿ ದರ್ಶನ್ ಅವರು ಧನುಷ್‌ ಆಗಿ ಅಬ್ಬರಿಸಿದ್ದಾರೆ. ಕ್ಷಣಕ್ಕೊಂದು ಬಣ್ಣ, ಗಳಿಗೆಗೊಂದು ವೇಷದಲ್ಲಿ ಹೀಗೆ ಹಲವು ಗೆಟಪ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಸೂರ್ಯಂಗೆ ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ. ನಾನ್ ಬರ್ತಿದ್ದೀನಿ ಚಿನ್ನ’ ಎಂದು ಡೈಲಾಗ್ ಹೇಳುವ ಮೂಲಕ ಭರವಸೆ ಮೂಡಿಸಿದ್ದಾರೆ.

ಮಿಲನಾ ಪ್ರಕಾಶ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ದರ್ಶನ್, ರಚನಾ ರೈ, ಶರ್ಮಿಳಾ ಮಾಂಡ್ರೆ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾಗೆ ಕಾಂತರಾಜ್ ಅವರು ಡೈಲಾಗ್ ಬರೆದಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.