ADVERTISEMENT

‘ಧೈರ್ಯಂ ಧರ್ಮಂ ದೇಶಂ’ ಎಂದ ಹೊಸಬರು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 13:52 IST
Last Updated 24 ಅಕ್ಟೋಬರ್ 2025, 13:52 IST
ಗಗನ ಮಲ್ನಾಡ್
ಗಗನ ಮಲ್ನಾಡ್   

ಬಹುತೇಕ ಹೊಸಬರೇ ಸೇರಿಕೊಂಡು ಸಿದ್ಧಪಡಿಸಿರುವ ‘ಧೈರ್ಯಂ ಧರ್ಮಂ ದೇಶಂ’ ಚಿತ್ರದ ಟ್ರೇಲರ್‌ ಹಾಗೂ ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ. ಕೆ.ಬಿ.ಮಂಜುನಾಥ್ ಸಿನಿಮಾಕ್ಕೆ ಕಥೆ ಬರೆದು ನಿರ್ದೇಶಿಸಿದ್ದಾರೆ. ಜತೆಗೆ ಕೆಬಿಎಂ ಪ್ರೊಡಕ್ಷನ್ಸ್ ಅಡಿಯಲ್ಲಿ ಬಂಡವಾಳವನ್ನೂ ಹೂಡಿದ್ದಾರೆ. 

‘ನಾನು ಇಲ್ಲಿಯವರೆಗೆ ಎರಡು ಕಿರುಚಿತ್ರಗಳನ್ನು ಮಾಡಿದ್ದೇನೆ. ಇದು ನನಗೆ ಮೊದಲ ಹಿರಿತೆರೆಯ ಅನುಭವ. ಸಾಮಾನ್ಯ ಪ್ರಜೆಯಾದವನು ಧೈರ್ಯ ಮಾಡಬೇಕು, ಅಧಿಕಾರಿಗಳು ಧರ್ಮವನ್ನು ಕಾಪಾಡಬೇಕು, ಯೋಧನಾದವನು ದೇಶವನ್ನು ಕಾಪಾಡಬೇಕು ಎಂಬುದು ಚಿತ್ರದ ಒಟ್ಟಾರೆ ಸಾರ. ಮಾನವೀಯತೆ, ಪ್ರೀತಿ, ಸಂಬಂಧಗಳ ಬೆಲೆಯನ್ನು ತೋರಿಸಿದ್ದೇವೆ’ ಎಂದರು ನಿರ್ದೇಶಕ. 

ಅರುಣ್‌ ವೆಂಕಟರಾಜುಗೆ ಗಗನ ಮಲ್ನಾಡ್‌ ಜೋಡಿಯಾಗಿದ್ದಾರೆ. ರಘು ಶಿವಮೊಗ್ಗ, ಚಾರ್ಲ್ಸ್ ಟೋನಿ, ಸುರೇಶ್‌ಬಾಬು, ಡಿ.ವಿ.ನಾಗರಾಜು, ಸುರೇಶ್‌ಬಾಬು, ರೋಹಿಣಿ ಮುಂತಾದವರು ಅಭಿನಯಿಸಿದ್ದಾರೆ.

ADVERTISEMENT

ಐದು ಗೀತೆಗಳಿಗೆ ಸೂರಜ್‌ ಜೋಯಿಸ್ ಸಂಗೀತ ಸಂಯೋಜಿಸಿದ್ದಾರೆ. ಎಸ್.ಕೆ.ಮಸ್ತಾನ್ ಷರೀಫ್ ಛಾಯಾಚಿತ್ರಗ್ರಹಣ, ಧನುಷ್.ಎಲ್.ಬೇಡಿ ಸಂಕಲನವಿದೆ. ಬೆಂಗಳೂರು, ಮಂಗಳೂರು, ಕೊಳ್ಳೇಗಾಲ ಮುಂತಾದೆಡೆ ಚಿತ್ರೀಕರಣ ನಡೆಸಲಾಗಿದೆ. ನವೆಂಬರ್ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.