ADVERTISEMENT

ಮೃಣಾಲ್ ಠಾಕೂರ್ ಜತೆ ಮದುವೆಗೆ ಸಜ್ಜಾದ್ರಾ ಧನುಷ್? ಇಲ್ಲಿದೆ ವದಂತಿಗಳ ಹಿಂದಿನ ಸತ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜನವರಿ 2026, 10:28 IST
Last Updated 16 ಜನವರಿ 2026, 10:28 IST
<div class="paragraphs"><p>ನಟ ಧನುಷ್,&nbsp;ಮೃಣಾಲ್ ಠಾಕೂರ್</p></div>

ನಟ ಧನುಷ್, ಮೃಣಾಲ್ ಠಾಕೂರ್

   

ಕಾಲಿವುಡ್ ನಟ ಧನುಷ್ ಅವರು ಜನಪ್ರಿಯ ನಟಿ ಮೃಣಾಲ್ ಠಾಕೂರ್ ಜತೆಗೆ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ನಟ, ನಿರ್ದೇಶಕ, ಬರಹಗಾರ ಮತ್ತು ನಿರ್ಮಾಪಕರಾಗಿ ತಮ್ಮದೇ ಆದ ಛಾಪು ಮೂಡಿಸಿರುವ ಧನುಷ್ ಅವರ ಮದುವೆ ವಿಚಾರ ಸಾಮಾಜಿಕ ಮಾಧ್ಯಮದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

ತಮಿಳಿನ ಸ್ಟಾರ್‌ ನಟ ಧನುಷ್

ADVERTISEMENT

ಧನುಷ್ ಮತ್ತು ಮೃಣಾಲ್ ಠಾಕೂರ್ ಬಹಳ ತಿಂಗಳುಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದು, ಇದೇ ವರ್ಷ ಪ್ರೇಮಿಗಳ ದಿನದಂದು (ಫೆಬ್ರವರಿ 14) ವಿವಾಹವಾಗಲು ಸಜ್ಜಾಗಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಇತ್ತೀಚೆಗೆ ಧನುಷ್ ಅವರ ವೈಯಕ್ತಿಕ ಜೀವನದ ಕೆಲವೊಂದು ವಿಚಾರಗಳು ಆಗಾಗ ಸಾಮಾಜಿಕ ಮಾಧ್ಯಮದಲ್ಲಿ ಓಡಾಡುತ್ತಲೇ ಇರುತ್ತವೆ. ಆದರೆ ಈಗ ‘ಸೀತಾ ರಾಮಂ’ ಸಿನಿಮಾದ ಮೂಲಕ ಹೆಚ್ಚು ಖ್ಯಾತಿ ಪಡೆದುಕೊಂಡಿರುವ ನಟಿ ಮೃಣಾಲ್ ಠಾಕೂರ್ ಅವರ ಜೊತೆಗೆ ವಿವಾಹವಾಗಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ.

ಮೃಣಾಲ್ ಠಾಕೂರ್

ಆದರೆ, ಈ ಬಗ್ಗೆ ನಟನಾಗಲಿ ಅಥವಾ ನಟಿಯಾಗಲಿ ಅಧಿಕೃತ ಹೇಳಿಕೆ ನೀಡಿಲ್ಲ. ಅಲ್ಲದೇ ಈ ಬಗ್ಗೆ ‘ಡೆಕ್ಕನ್ ಹೆರಾಲ್ಡ್’ ನಟ–ನಟಿಯರ ಆಪ್ತರನ್ನು ಸಂಪರ್ಕಿಸಿ ಮದುವೆ ಬಗ್ಗೆ ಪರಿಶೀಲಿಸಿದಾಗ, ‘ಇದೊಂದು ಸಂಪೂರ್ಣವಾಗಿ ಆಧಾರರಹಿತ ಸುದ್ದಿಯಾಗಿದೆ. ದಯವಿಟ್ಟು ಈ ಸುಳ್ಳು ಸುದ್ದಿಯನ್ನು ನಂಬಲೇಬೇಡಿ’ ಎಂದು ಮಾಹಿತಿ ನೀಡಿದ್ದಾರೆ. ಈ ಮೂಲಕ ಸಾಮಾಜಿಕ ಮಧ್ಯಮದಲ್ಲಿ ಹರಿದಾಡುತ್ತಿರುವ ಊಹಾಪೋಹಗಳಿಗೆ ಅಂತ್ಯ ಹಾಡಿದಂತಾಗಿದೆ. ಸದ್ಯ ನಟ ಧನುಷ್ ತಮ್ಮ ಮುಂದಿನ ಸಿನಿಮಾಗಳ ಕೆಲಸದಲ್ಲಿ ಸಕ್ರಿಯರಾಗಿದ್ದು, ಇತ್ತ ಮೃಣಾಲ್ ಠಾಕೂರ್ ಅವರು ನಟಿಸಿರುವ ಸಾಕಷ್ಟು ಸಿನಿಮಾಗಳು ಬಿಡುಗಡೆಯ ಹಂತದಲ್ಲಿದೆ.

ನಟ ಧನುಷ್ ಅವರು ಈ ಹಿಂದೆ ಐಶ್ವರ್ಯಾ ರಜನಿಕಾಂತ್ ಅವರನ್ನು ಮದುವೆಯಾಗಿದ್ದರು. 18 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದ ಜೋಡಿ 2022ರಲ್ಲಿ ವಿಚ್ಛೇದನ ಪಡೆದಿರುವುದಾಗಿ ಘೋಷಿಸಿದರು. ಇವರಿಗೆ ಯಾತ್ರಾ ಮತ್ತು ಲಿಂಗಾ ಎಂಬ ಇಬ್ಬರು ಗಂಡು ಮಕ್ಕಳು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.