ಚಿತ್ರ ಕೃಪೆ: taran_adarsh
ಬಾಲಿವುಡ್ ಹಿರಿಯ ನಟ ಧರ್ಮೇಂದ್ರ (89) ಇಂದು (ಸೋಮವಾರ) ನಿಧನರಾಗಿದ್ದಾರೆ. 1960ರಲ್ಲಿ ತೆರೆಕಂಡ ‘ದಿಲ್ ಭಿ ತೇರಾ ಹಮ್ ಭಿ ತೇರೆ‘ ಚಿತ್ರದ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ್ದರು.
ಧರ್ಮೇಂದ್ರ ಅವರ ನಟನೆಯ ಚಿತ್ರಗಳಿಗೆ ಅನೇಕ ಪ್ರಶಸ್ತಿಗಳು ದೊರಕಿವೆ. ಅವರು ಪಡೆದ ಪ್ರಶಸ್ತಿಗಳ ವಿವರ ಇಲ್ಲಿದೆ.
ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಹಿನ್ನೆಲೆಯಲ್ಲಿ 2012ರಲ್ಲಿ 'ಪದ್ಮಭೂಷಣ' ನೀಡಲಾಗಿತ್ತು.
1991ರ ಫಿಲಂಫೇರ್‌ನಲ್ಲಿ 'ಘಾಯಲ್' ಚಿತ್ರಕ್ಕಾಗಿ 'ಅತ್ಯುತ್ತಮ ಚಲನಚಿತ್ರ' ಪ್ರಶಸ್ತಿ
1997ರಲ್ಲಿ 'ಜೀವಮಾನ ಸಾಧನೆ' ಪ್ರಶಸ್ತಿ
1974ರ ಫಿಲಂಫೇರ್‌ನಲ್ಲಿ 'ಪ್ರೊಸೆಷನ್ ಆಫ್ ಮೆಮೋರೀಸ್' ಚಿತ್ರದ ನಟನೆಗಾಗಿ 'ಅತ್ಯುತ್ತಮ ನಟ'
1975ರ ಫಿಲಂಫೇರ್‌ನಲ್ಲಿ 'ರೇಶಮ್ ಕಿ ಡೋರಿ' ಚಿತ್ರದ ನಟನೆಗಾಗಿ 'ಅತ್ಯುತ್ತಮ ನಟ'
1972ರ ಫಿಲಂಫೇರ್‌ನಲ್ಲಿ 'ಮೇರಾ ಗಾಂವ್ ಮೇರಾ ದೇಶ್' ನಟನೆಗಾಗಿ ‘ಅತ್ಯುತ್ತಮ ನಟ'
1990ರಲ್ಲಿ 'ಘಾಯಲ್' ಚಿತ್ರಕ್ಕಾಗಿ 'ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ' ಯನ್ನು ಪಡೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.