ADVERTISEMENT

ಹೇಮಾ ಗೆಲ್ಲದಿದ್ದರೆ ಟ್ಯಾಂಕ್‌ನಿಂದ ಜಿಗಿದು ಸಾಯುತ್ತೇನೆ ಎಂದಿದ್ದ ಧರ್ಮೇಂದ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ನವೆಂಬರ್ 2025, 11:34 IST
Last Updated 24 ನವೆಂಬರ್ 2025, 11:34 IST
<div class="paragraphs"><p>ಧರ್ಮೇಂದ್ರ, ಹೇಮಾಮಾಲಿನಿ</p></div>

ಧರ್ಮೇಂದ್ರ, ಹೇಮಾಮಾಲಿನಿ

   

ಶೋಲೆ ಸಿನಿಮಾಗಳಲ್ಲಿ ಖಳನಾಯಕರ ಕೈಯಿಂದ ಹೇಮಾಮಾಲಿನಿಯನ್ನು ರಕ್ಷಿಸಿದ್ದ ನಟ ಧರ್ಮೇಂದ್ರ ಅವರು, ಈ ಹಿಂದೆ ಹೇಮಾ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸದಿದ್ದರೆ ಟ್ಯಾಂಕ್‌ನಿಂದ ಜಿಗಿದು ಸಾಯುತ್ತೇನೆ ಎಂದಿದ್ದರು.

2019ರ ಲೋಕಸಭಾ ಚುನಾವಣೆಯಲ್ಲಿ ಮಥುರಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಹೇಮಾಮಾಲಿನಿ ಅವರು ಜಾಟ್‌ ಸಮುದಾಯದ ಜನರ ಬಳಿ ಮತಯಾಚನೆಗೆ ಹೋಗಿದ್ದರು. ಆಗ ಪತಿ ಧರ್ಮೇಂದ್ರ ಅವರು ಪತ್ನಿ ಹೇಮಾಮಾಲಿನಿ ಪರ ಭರ್ಜರಿ ಪ್ರಚಾರ ಮಾಡಿದ್ದರು.

ADVERTISEMENT

ಜಾಟ್‌ ಸಮುದಾಯದವರಾಗಿದ್ದ ಧರ್ಮೇಂದ್ರ, ತಮ್ಮ ಸಮುದಾಯದ ಜನರು ಹೆಚ್ಚಾಗಿರುವ ಪ್ರದೇಶಗಳಲ್ಲಿ ರೋಡ್‌ ಶೋಗಳನ್ನು ನಡೆಸಿದ್ದರು. ಸೋನಕ್‌ ಗ್ರಾಮದಲ್ಲಿ ಆಯೋಜಿಸಿದ್ದ ಚುನಾವಣಾ ಸಭೆಯೊಂದರಲ್ಲಿ ಮಾತನಾಡಿದ್ದ ಅವರು, ‘ಜಾಟರು ಹೊಲಗಳಲ್ಲಿ ಕೆಲಸ ಮಾಡುವವರಷ್ಟೇ ಅಲ್ಲ, ರಾಷ್ಟ್ರದ ರಕ್ಷಣೆಗಾಗಿ ಪ್ರಾಣದ ಹಂಗು ತೊರೆದು ಹೋರಾಡಲೂ ಸಿದ್ಧರಿರುತ್ತಾರೆ ಎಂದಿದ್ದರು.

ಮತ್ತೆ ಮಾತನ್ನು ಮುಂದುವರೆಸಿ, ಶೋಲೆ ಸಿನಿಮಾದಲ್ಲಿ ಹೇಮಾಮಾಲಿನಿಯ ಪ್ರೀತಿಯನ್ನು ಪಡೆಯಲು ನೀರಿನ ಟ್ಯಾಂಕ್‌ ಮೇಲೇರಿ, ‘ಜಿಗಿದು ಸಾಯುತ್ತೇನೆ’ ಎಂದು ನಾಟಕವಾಡಿದ ದೃಶ್ಯವನ್ನು ಪ್ರಚಾರ ಸಭೆಯಲ್ಲಿ ಉಲ್ಲೇಖಿಸಿದ ಧರ್ಮೇಂದ್ರ, ‘ಹೇಮಾಮಾಲಿನಿಯನ್ನು ಚುನಾವಣೆಯಲ್ಲಿ ಗೆಲ್ಲಿಸದಿದ್ದರೆ ನಾನು ನಿಮ್ಮ ಊರಿನ ಟ್ಯಾಂಕ್‌ ಮೇಲೆ ಏರಿ ಜಿಗಿದು ಸಾಯುತ್ತೇನೆ’ ಎಂದು ಹಾಸ್ಯ ಚಟಾಕಿ ಹಾರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.