ಧಮೇಂದ್ರ ನಟನೆಯ ಕೊನೆಯ ಚಿತ್ರ ‘ಇಕ್ಕೀಸ್’ ಪೋಸ್ಟರ್ ಬಿಡುಗಡೆ
ಮುಂಬೈ: ಬಾಲಿವುಡ್ ಹಿರಿಯ ನಟ ಧಮೇಂದ್ರ ಇಂದು (ಸೋಮವಾರ) ನಿಧನರಾದರು. ಇನ್ನೊಂದೆಡೆ ಧಮೇಂದ್ರ ನಟನೆಯ ಕೊನೆಯ ಸಿನಿಮಾ ‘ಇಕ್ಕೀಸ್’ ಪೋಸ್ಟರ್ ಅನ್ನು ಚಿತ್ರತಂಡ ಇಂದು ಬೆಳಿಗ್ಗೆ ಬಿಡುಗಡೆ ಮಾಡಿದೆ.
ಈ ಚಿತ್ರದಲ್ಲಿ ನಾಯಕನಾಗಿ ಅಗಸ್ತ್ಯ ನಂದ ಕಾಣಿಸಿಕೊಂಡಿದ್ದು, ಅವರ ತಂದೆಯ ಪಾತ್ರವನ್ನು ಧಮೇಂದ್ರ ನಿರ್ವಹಿಸಿದ್ದಾರೆ. ಸಿನಿಮಾ ಡಿ.25ರಂದು ತೆರೆಕಾಣುತ್ತಿದೆ.
ಅಗಸ್ತ್ಯ ನಂದ ಅವರು ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಮೊಮ್ಮಗ. ಶ್ವೇತಾ ಹಾಗೂ ಉದ್ಯಮಿ ನಿಖಿಲ್ ನಂದ ಅವರ ಪುತ್ರ.
ಇಕ್ಕೀಸ್ ಪೋಸ್ಟರ್ ಜತೆಗೆ ಒಕ್ಕಣೆಯಲ್ಲಿ ‘ಅಪ್ಪಂದಿರು ಮಕ್ಕಳನ್ನು ಬೆಳೆಸಿದರೆ, ಶ್ರೇಷ್ಠ ವ್ಯಕ್ತಿಗಳು ದೇಶವನ್ನು ಬೆಳೆಸುತ್ತಾರೆ. ಧರ್ಮೇಂದ್ರ ಅವರು 21 ವರ್ಷದಲ್ಲಿ ಅಮರರಾದ ಯೋಧನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ’ ಎಂದು ಚಿತ್ರತಂಡ ಬರೆದುಕೊಂಡಿದೆ.
ಇಕ್ಕೀಸ್ ಚಿತ್ರ, 1971ರ ಭಾರತ–ಪಾಕಿಸ್ತಾನ ಯುದ್ಧದ ವೇಳೆ ವೀರ ಮರಣ ಹೊಂದಿದ ಪರಮವೀರ ಚಕ್ರ ಪುರಸ್ಕೃತ ಸೆಕೆಂಡ್ ಲೆಫ್ಟಿನೆಂಟ್ ಅರುಣ್ ಖೇತ್ರಪಾಲ್ ಅವರ ಜೀವನಗಾಥೆಯಾಗಿದೆ.
ಮ್ಯಾಕ್‌ಡಾಕ್ ಫಿಲ್ಮ್ಸ್ ಅವರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಶ್ರೀರಾಮ್ ರಾಘವನ್ ನಿರ್ದೇಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.