ADVERTISEMENT

ಜೋಗಿ ಪ್ರೇಮ್‌–ಧ್ರುವ ಸರ್ಜಾ ಜೋಡಿಯಲ್ಲಿ ಸಿದ್ಧವಾಗ್ತಿದೆ 'ಕೆಡಿ'

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಅಕ್ಟೋಬರ್ 2022, 5:58 IST
Last Updated 21 ಅಕ್ಟೋಬರ್ 2022, 5:58 IST
   

ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಜೊತೆ ನಿರ್ದೇಶಕ 'ಜೋಗಿ' ಪ್ರೇಮ್‌ ಭರ್ಜರಿ ಸಿನಿಮಾ ಮಾಡೋಕೆ ಸಿದ್ಧವಾಗಿರೋದು ಗೊತ್ತೇ ಇದೆ. ಅಂದಹಾಗೆ ಈ ಚಿತ್ರಕ್ಕೆ ‘ಕೆಡಿ’ ಎಂಬ ಶೀರ್ಷಿಕೆ ಇಡಲಾಗಿದೆ. ಬಹುನಿರೀಕ್ಷಿತ ಸಿನಿಮಾದ ಟೈಟಲ್‌ ಟೀಸರ್‌ ಗುರುವಾರ ಬಿಡುಗಡೆಯಾಗಿದೆ.

ಸಂಜಯ್‌ ದತ್‌, ಮೋಹನ್‌ಲಾಲ್‌, ವಿಜಯ್‌ ಸೇತುಪತಿ ಮೊದಲಾದವರಿಗೆ ಪ್ರೇಮ್‌ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರು. ಇವರೆಲ್ಲ ಈ ಚಿತ್ರದಲ್ಲಿ ನಟಿಸುತ್ತಾರೆ ಎಂಬ ವಂದತಿಯೂ ಇದೆ. ಖುದ್ದು ಸಂಜಯ್‌ ದತ್‌ ಕಾರ್ಯಕ್ರಮದಲ್ಲಿ ಹಾಜರಿದ್ದು ಈ ಊಹಾಪೋಹಕ್ಕೆ ಮತ್ತಷ್ಟು ಇಂಬು ನೀಡಿದ್ದಾರೆ.

ಮಚ್ಚನ್ನು ಹಲ್ಲಿನಲ್ಲಿ ಕಚ್ಚಿ ಹಿಡಿದಿರುವ ಧ್ರುವ ಸರ್ಜಾ, ಶೀರ್ಷಿಕೆಗೆ ತಕ್ಕಂತೆ ರಕ್ತಸಿಕ್ತರಾಗಿ ಅಬ್ಬರಿಸುವಂತಿದೆ. ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆಯಾಗಿದ್ದು ಧ್ರುವ ಸರ್ಜಾ ರೆಟ್ರೋ ಸ್ಟೈಲ್‌ನ ಕಾಸ್ಟ್ಯೂಮ್‌ನಲ್ಲಿ ಬಾಯಲ್ಲಿ ಲಾಂಗ್‌ ಕಚ್ಚಿಕೊಂಡು, ವ್ಯಕ್ತಿಯೊಬ್ಬರನ್ನು ಮೂಟೆ ಕಟ್ಟುತ್ತಿದ್ದಾರೆ. ಸಿನಿಮಾದಲ್ಲಿ ರೆಟ್ರೋ ಕಥೆಯನ್ನು ಪ್ರೇಮ್‌ ಹೇಳಲು ಹೊರಟಿದ್ದಾರೆ. ಬೆಂಗಳೂರಿನ ರೌಡಿಸಂ ಕಥೆಗೆ ದೊಡ್ಡ ಮಟ್ಟದ ಸೆಟ್‌ ಹಾಕಲಾಗಿದೆ ಎಂಬುದಾಗಿ ಪ್ರಜಾವಾಣಿ ಈ ಹಿಂದೆ ವರದಿ ಮಾಡಿತ್ತು.

ADVERTISEMENT

ಈ ಚಿತ್ರ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕೆವಿಎನ್‌ ಪ್ರೊಡಕ್ಷನ್‌ ಈ ಸಿನಿಮಾ ನಿರ್ಮಿಸುತ್ತಿದ್ದು, ಬಹುಭಾಷಾ ತಾರೆಯರನ್ನು ಚಿತ್ರಕ್ಕೆ ಕರೆತರುವ ಆಲೋಚನೆಯಲ್ಲಿದೆ.

ಅರ್ಜುನ್‌ ಜನ್ಯ ಸಂಗೀತ, ವಿಲಿಯಂ ಡೇವಿಡ್‌ ಸಿನಿಮಾಟೋಗ್ರಾಫಿ ಚಿತ್ರಕ್ಕಿದೆ. ಶೀಘ್ರದಲ್ಲಿಯೇ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನುತ್ತಿದೆ ಚಿತ್ರತಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.