ADVERTISEMENT

ಹೆಣ್ಣು ಮಗುವಿನ ತಂದೆಯಾದ ಸಂಭ್ರಮದಲ್ಲಿ ಧ್ರುವ ಸರ್ಜಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಅಕ್ಟೋಬರ್ 2022, 10:14 IST
Last Updated 2 ಅಕ್ಟೋಬರ್ 2022, 10:14 IST
ಧ್ರುವ ಸರ್ಜಾ ದಂಪತಿ
ಧ್ರುವ ಸರ್ಜಾ ದಂಪತಿ   

ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಮಗಳು ಜನಿಸಿದ ಖುಷಿಯಲ್ಲಿದ್ದಾರೆ. ಅವರ ಪತ್ನಿ ಪ್ರೇರಣಾ ಶಂಕರ್ ಭಾನುವಾರ ಬನಶಂಕರಿಯ ಖಾಸಗಿ ಆಸ್ಪತ್ರೆಯಲ್ಲಿ ಮುದ್ದಾದ ಮಹಾಲಕ್ಷ್ಮಿಗೆ ಜನ್ಮ ನೀಡಿದ್ದಾರೆ. ಈ ಸುದ್ದಿಯನ್ನು ಧ್ರುವ ಸರ್ಜಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, 'ಪತ್ನಿ ಪ್ರೇರಣಾಗೆ ನಾರ್ಮಲ್ ಡೆಲಿವರಿಯಾಗಿದೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ' ಎಂದು ಬರೆದುಕೊಂಡಿದ್ದಾರೆ.

'ನಮ್ಮ ಅಣ್ಣನ ಮಗ ನನಗೂ ಮಗ. ಹೀಗಾಗಿ ನಮಗೆ ಮಗಳು ಬೇಕು. ಈ ಖುಷಿಯನ್ನು ನೋಡಲು ಅಣ್ಣ ಇರಬೇಕಿತ್ತು’ ಎಂದು ಈ ಹಿಂದೆ ಧ್ರುವ ಸರ್ಜಾ ಹೇಳಿದ್ದರು. ಅಣ್ಣ ಚಿರಂಜೀವಿ ಸರ್ಜಾ ಅಕಾಲಿಕ ಮರಣ ಧ್ರುವ ಸರ್ಜಾ ಅವರನ್ನು ಬಹಳಕಾಡಿದೆ. ಹೀಗಾಗಿ ಅವರು ಮಗುವಿನ ಖುಷಿಯಲ್ಲೂ ಅಣ್ಣನ ಅಗಲಿಕೆ ನೋವು ತೋಡಿಕೊಂಡಿದ್ದರು.

ಧ್ರುವ ಸರ್ಜಾ ಹಾಗೂ ಪ್ರೇರಣಾ ಅವರದ್ದು ಪ್ರೇಮ ವಿವಾಹ. ಪಕ್ಕದ ಮನೆಯಲ್ಲಿಯೇ ಇರುವ ಪ್ರೇರಣಾ ಅವರನ್ನು ಧ್ರುವಾ 2019ರ ನವೆಂಬರ್‌ನಲ್ಲಿ ಮದುವೆಯಾಗಿದ್ದರು. ಬಹಳ ಆಲೋಚಿಸಿ ಕಥೆಗಳನ್ನು ಆಯ್ದುಕೊಳ್ಳುವ ಧ್ರುವ ಅವರ ಮಾರ್ಟಿನ್‌ ಚಿತ್ರ ಚಿತ್ರೀಕರಣ ಹಂತದಲ್ಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.