ADVERTISEMENT

ಸರಳ ಸಜ್ಜನ ವ್ಯಕ್ತಿ ಅಪ್ಪು: ಪುನೀತ್‌ ಕೊಂಡಾಡಿದ ನಿರ್ದೇಶಕ ಮಹೇಶ್‌ ಬಾಬು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜನವರಿ 2026, 12:11 IST
Last Updated 13 ಜನವರಿ 2026, 12:11 IST
<div class="paragraphs"><p>ಪುನೀತ್ ರಾಜ್‌ಕುಮಾರ್ ಜೊತೆಗೆ&nbsp;ನಿರ್ದೇಶಕ ಮಹೇಶ್‌ ಬಾಬು</p></div>

ಪುನೀತ್ ರಾಜ್‌ಕುಮಾರ್ ಜೊತೆಗೆ ನಿರ್ದೇಶಕ ಮಹೇಶ್‌ ಬಾಬು

   

ಅಶ್ವಿನಿ ಪುನೀತ್ ರಾಜ್‌ಕುಮಾರ್ ಒಡೆತನದ ಪಿಆರ್‌ಕೆ ಆ್ಯಪ್ ಸಂದರ್ಶನದಲ್ಲಿ ಮಾತನಾಡಿರುವ ನಿರ್ದೇಶಕ ಮಹೇಶ್ ಬಾಬು ಅವರು ಅಪ್ಪು ಅವರ ಜತೆಗಿನ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

‘ಪುನೀತ್ ರಾಜ್‌ಕುಮಾರ್ ಅವರ ಜೊತೆ ‘ಅಪ್ಪು’ ಸಿನಿಮಾದಲ್ಲಿ ನಾನು ಸಹ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದಾಗ ಅನೇಕ ಒಳ್ಳೆಯ ವಿಚಾರಗಳ ಬಗ್ಗೆ ಚರ್ಚಿಸುತ್ತಿದ್ದೆವು ಎಂದು ಮೆಲುಕು ಹಾಕಿದ್ದಾರೆ.

ADVERTISEMENT

‘ಅಣ್ಣಾವ್ರ ಮಗ ಎಂದ ಮಾತ್ರಕ್ಕೆ ಜನರು ನನ್ನ ಸಿನಿಮಾ ನೋಡಬಾರದು. ಅಭಿಮಾನಿಗಳು ನನ್ನ ನಟನೆಯನ್ನು ಇಷ್ಟಪಟ್ಟರೆ ಮಾತ್ರ ಚಿತ್ರರಂಗದಲ್ಲಿ ಉಳಿಯುವೆ ಎನ್ನುತ್ತಿದ್ದರು’ ಎಂದು ಮಹೇಶ್ ಹೇಳಿಕೊಂಡಿದ್ದಾರೆ. 

‘ಅಪ್ಪು’ ಚಿತ್ರದಲ್ಲಿ ನಾಯಕಿ ರಕ್ಷಿತಾ ಅವರನ್ನು ಪುನೀತ್ ಅವರು ಅಪ್ಪಿಕೊಳ್ಳುವ ದೃಶ್ಯದ ಚಿತ್ರೀಕರಣ ಮಾಡಬೇಕಿತ್ತು.  ಪತ್ನಿ ಅಶ್ವಿನಿ ಅವರು ಬೇಸರ ಮಾಡಿಕೊಳ್ಳುತ್ತಾರೆ ಎಂದು ಅಪ್ಪು ಆ ದೃಶ್ಯ ಮಾಡಲು ಒಪ್ಪಿರಲಿಲ್ಲ. ಪಾರ್ವತಮ್ಮ ಅವರು ಹೇಳಿದ ನಂತರ ಅಪ್ಪುಗೆ ದೃಶ್ಯಕ್ಕೆ ಒಪ್ಪಿಕೊಂಡಿದ್ದರು’ ಎಂದು ಅಪ್ಪು ಅವರ ಜೊತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ. 

‘ವೀರ ಕನ್ನಡಿಗ’ ಚಿತ್ರದ ಹಾಡಿನ ಚಿತ್ರೀಕರಣ ಮುಗಿಸಿ ಮನೆಗೆ ಹಿಂದಿರುಗಬೇಕಾದರೆ ನಾನು ರೈಲು ಟಿಕೆಟ್ ಬುಕ್ ಮಾಡಿದ್ದೆ, ಪುನೀತ್ ರಾಜ್‌ಕುಮಾರ್ ವಿಮಾನ ಟಿಕೆಟ್ ಬುಕ್ ಮಾಡಿದ್ದರು. ನಾನು ರೈಲಿನಲ್ಲಿ ಹೋಗುತ್ತೇನೆಂದು ಆ ಕೂಡಲೇ ನನಗೂ ವಿಮಾನ ಟಿಕೆಟ್ ಬುಕ್ ಮಾಡಿಕೊಟ್ಟಿದ್ದರು’ ಎಂದು ಅಪ್ಪು ಅವರ ಸರಳತೆ ಬಗ್ಗೆ ಕೊಂಡಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.