
ಬೆಂಗಳೂರು: ‘ಪುನೀತ್ ರಾಜ್‌ಕುಮಾರ್ ಅವರನ್ನು ರಾಜಕೀಯಕ್ಕೆ ಕರೆತರಬೇಕು ಎಂದು ಸಾಕಷ್ಟು ಪ್ರಯತ್ನಪಟ್ಟಿದ್ದೆ. ಆದರೆ ಅವರು ಒಪ್ಪಲಿಲ್ಲ. ಇದನ್ನು ಇಲ್ಲಿಯವರೆಗೂ ಎಲ್ಲೂ ಹೇಳಿಕೊಂಡಿರಲಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಶನಿವಾರ(ಅ.25) ಸ್ಟಾರ್ ಫ್ಯಾನ್‌ಡಮ್‌ನ ಪಿಆರ್‌ಕೆ ಆ್ಯಪ್ ಅನಾವರಣಗೊಳಿಸಿ ಮಾತನಾಡಿದ ಅವರು, ‘ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರನ್ನೂ ರಾಜಕೀಯಕ್ಕೆ ಕರೆದಿದ್ದೆ. ಅವರೂ ಒಪ್ಪಿರಲಿಲ್ಲ. ಕುಟುಂಬದ ಹೆಜ್ಜೆಯಂತೆ ನಡೆಯುತ್ತೇನೆ ಎಂದಿದ್ದರು’ ಎಂದು ನೆನಪಿಸಿಕೊಂಡರು.
‘ಪುನೀತ್ ಅವರು ಸಮಾಜಕ್ಕೆ ದೊಡ್ಡ ಕೊಡುಗೆಯನ್ನು ಚಿಕ್ಕ ವಯಸ್ಸಿನಲ್ಲೇ ಕೊಟ್ಟು ಹೋಗಿದ್ದಾರೆ. ನಾನೂ ಅಪ್ಪು ಒಂದೇ ಜಿಮ್‌ಗೆ ಹೋಗುತ್ತಿದ್ದೆವು. ಸುಮಾರು ಹದಿನೈದು ವರ್ಷಗಳ ಪರಿಚಯ. ಅವರು ನನ್ನ ಒಳ್ಳೆಯ ಸ್ನೇಹಿತರಾಗಿದ್ದರು. ಅಪ್ಪು ಅವರನ್ನು ಮುಂದಿನ ಪೀಳಿಗೆಯೂ ನೆನಪಿಸಿಕೊಳ್ಳಬೇಕು. ಅಪ್ಪು ಹೆಸರಿನಲ್ಲಿ ಬಂದಿರುವ ಈ ಆ್ಯಪ್ ರಾಮಾಯಣ, ಮಹಾಭಾರತ ಗ್ರಂಥದಂತೆ ಶಾಶ್ವತವಾಗಿ ಇರಲಿದೆ. ತಾಯಿಯಂತೆ ಅಪ್ಪು ಅವರನ್ನು ಅನೇಕರು ಇಂದಿಗೂ ನೆನಪಿಸಿಕೊಳ್ಳುತ್ತಿದ್ದಾರೆ. ಪುನೀತ್ ಅವರು ಬದುಕಿನಲ್ಲಿ ಮನುಷ್ಯತ್ವಕ್ಕೆ ಹೆಚ್ಚಿನ ಬೆಲೆ ಕೊಟ್ಟವರು. ಎಲ್ಲರ ಹೃದಯವನ್ನು ಈ ಮೂಲಕ ಗೆದ್ದಿದ್ದಾರೆ. ಇವುಗಳೆಲ್ಲವನ್ನೂ ಜನರಿಗೆ ಪರಿಚಯಿಸಲು ಈ ಆ್ಯಪ್ ಸಹಕಾರಿಯಾಗಲಿದೆ’ ಎಂದರು.
ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಸ್ಟಾರ್ ಫ್ಯಾನ್‌ಡಮ್ ಸ್ಥಾಪಕ ಸಮರ್ಥ ನಾಗಭೂಷಣಂ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.