ADVERTISEMENT

₹10 ಲಕ್ಷ ಮೌಲ್ಯದ ತೊಟ್ಟಿಲು ಖರೀದಿಸಿದ ಧ್ರುವ ಸರ್ಜಾ!

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 14:27 IST
Last Updated 20 ಅಕ್ಟೋಬರ್ 2020, 14:27 IST
ಅಣ್ಣನ ಮಗುವಿನ ನಿರೀಕ್ಷೆಯಲ್ಲಿರುವ ಧ್ರುವ ಕುಟುಂಬದವರು ಬೆಳ್ಳಿ ತೊಟ್ಟಿಲು ಖರೀದಿಸಿರುವುದು.
ಅಣ್ಣನ ಮಗುವಿನ ನಿರೀಕ್ಷೆಯಲ್ಲಿರುವ ಧ್ರುವ ಕುಟುಂಬದವರು ಬೆಳ್ಳಿ ತೊಟ್ಟಿಲು ಖರೀದಿಸಿರುವುದು.   

ತುಂಬು ಗರ್ಭಿಣಿ ಮೇಘನಾ ರಾಜ್‌ ಅವರ ಸೀಮಂತ ಕಾರ್ಯವನ್ನು ಎರಡೂ ಕುಟುಂಬಗಳು ಸೇರಿ ಇತ್ತೀಚೆಗಷ್ಟೇ ಅದ್ಧೂರಿಯಾಗಿ ಮಾಡಿದ್ದವು. ಮನೆಗೆ ಹೊಸ ಅತಿಥಿ ಅಂದರೆ ಚಿರು ಅವರ ವಾರಸುದಾರ/ಳನ್ನು ಬರಮಾಡಿಕೊಳ್ಳಲು ಇದೀಗ ದಿನಗಣನೆ ಮಾಡುತ್ತಿದ್ದಾರೆ ಕುಟುಂಬದ ಸದಸ್ಯರು.

ಈ ನಡುವೆ ಚಿರು ಸಹೋದರ ಧ್ರುವ ಸರ್ಜಾ ಅವರು, ತಮ್ಮ ಕುಟುಂಬಕ್ಕೆ ಬರಲಿರುವ ಪುಟಾಣಿಯನ್ನು ಅದ್ಧೂರಿಯಾಗಿ ಸ್ವಾಗತಿಸಲು ಬೆಳ್ಳಿಯ ತೊಟ್ಟಿಲನ್ನೇ ಖರೀಸಿದ್ದಾರೆ. ಅದರ ಬೆಲೆ ಬರೋಬರಿ ₹10 ಲಕ್ಷ.

ಮೇಘನಾ ಅವರ ಸೀಮಂತ ಶಾಸ್ತ್ರವನ್ನು ಜೆಪಿ ನಗರದ ತಮ್ಮ ಮನೆಯಲ್ಲಿ ಕುಟುಂಬ ಸದಸ್ಯರು ಇತ್ತೀಚೆಗಷ್ಟೇ ನೆರವೇರಿಸಿದ್ದರು. ಹೋಟೆಲ್‌ವೊಂದರಲ್ಲಿ ಬೇಬಿ ಶವರ್ ಆಯೋಜಿಸಿ, ಈ ಕಾರ್ಯಕ್ರಮಕ್ಕೆ ಅವರ ಕುಟುಂಬದ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.