ADVERTISEMENT

ದುಲ್ಕರ್ ಸಲ್ಮಾನ್ ನಟನೆಯ ಕಾಂತ ಒಟಿಟಿ ಬಿಡುಗಡೆ ದಿನಾಂಕ ನಿಗದಿ: ಎಲ್ಲಿ ನೋಡಬಹುದು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಡಿಸೆಂಬರ್ 2025, 11:21 IST
Last Updated 8 ಡಿಸೆಂಬರ್ 2025, 11:21 IST
<div class="paragraphs"><p>ಕಾಂತ ಸಿನಿಮಾದಲ್ಲಿ ನಟ ದುಲ್ಕರ್ ಸಲ್ಮಾನ್</p></div>

ಕಾಂತ ಸಿನಿಮಾದಲ್ಲಿ ನಟ ದುಲ್ಕರ್ ಸಲ್ಮಾನ್

   

ಚಿತ್ರ: @pranav10__

ನಟ ದುಲ್ಕರ್ ಸಲ್ಮಾನ್ ಅಭಿನಯದ ‘ಕಾಂತ’ ಸಿನಿಮಾ ನವೆಂಬರ್ 14ರಂದು ಬಿಡುಗಡೆಯಾಗಿತ್ತು. ಚಿತ್ರಮಂದಿರಗಳಲ್ಲಿ ನಿರೀಕ್ಷಿತ ಪ್ರದರ್ಶನ ಕಾಣದ ಕಾಂತ ಸಿನಿಮಾ, ಬಿಡುಗಡೆಯಾದ ಒಂದೇ ತಿಂಗಳಿಗೆ ಒಟಿಟಿಯಲ್ಲಿ ಪ್ರಸಾರ ಕಾಣಲು ಸಿದ್ಧಗೊಂಡಿದೆ.

ಕಾಂತ ಸಿನಿಮಾದ ಒಟಿಟಿ ಪ್ರಸಾರದ ಹಕ್ಕನ್ನು ‘ನೆಟ್‌ಫ್ಲಿಕ್ಸ್’ ಪಡೆದುಕೊಂಡಿದ್ದು, ಡಿಸೆಂಬರ್ 12ರಿಂದ ಸ್ಟ್ರೀಮಿಂಗ್ ಆಗಲಿದೆ ಎಂದು ತಿಳಿಸಿದೆ. ಇತ್ತೀಚಿನ ದಿನಗಳಲ್ಲಿ ನಟ ದುಲ್ಕರ್ ಸಲ್ಮಾನ್ ಯಾವುದೇ ಸಿನಿಮಾದಲ್ಲಿ ನಟಿಸಿದರು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಗೆ ಕಾಣುತ್ತಿತ್ತು. ಆದರೆ, ಕಾಂತ ನಿರೀಕ್ಷೆಯಷ್ಟು ಗಳಿಕೆ ಕಂಡಿಲ್ಲ.

ಸಿನಿಮಾ ಗಳಿಕೆಯ ಮಾಹಿತಿ ನೀಡುವ ಸಕ್ನಿಲ್ಕ್ ಪ್ರಕಾರ, ಕಾಂತ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು ₹35 ಕೋಟಿ ಗಳಿಕೆ ಮಾಡಿತ್ತು. ಇದರಲ್ಲಿ ಭಾರತದಲ್ಲಿ ಸುಮಾರು ₹27 ಕೋಟಿ. ಹಾಗೂ ವಿದೇಶದಿಂದ ಉಳಿದ ₹8 ಕೋಟಿ ಗಳಿಸಿದೆ. ಈ ಸಿನಿಮಾವನ್ನು ದುಲ್ಕರ್ ಸಲ್ಮಾನ್ ಮತ್ತು ರಾಣಾ ದಗ್ಗುಬಾಟಿ ಜಂಟಿಯಾಗಿ ನಿರ್ಮಿಸಿದ್ದರು. ಈ ಸಿನಿಮಾದಲ್ಲಿ ನಟ ದುಲ್ಕರ್ ಸಲ್ಮಾನ್ ಅವರಿಗೆ ನಾಯಕಿಯಾಗಿ ಭಾಗ್ಯಶ್ರೀ ಬೋರ್ಸೆ ಜೋಡಿಯಾಗಿದ್ದಾರೆ.

'ಕಾಂತ' ಸಿನಿಮಾ ಎಂ.ಕೆ. ತ್ಯಾಗರಾಜ ಅವರ ಜೀವನ ಆಧಾರಿತ ಕಥೆಯಾಗಿರಬಹುದು ಎಂದು ಅನೇಕರು ಊಹಿಸಿದ್ದರು. ಆದರೆ, ಅದು ನೈಜ ಘಟನೆ ಅಥವಾ ವ್ಯಕ್ತಿಯನ್ನು ಆಧರಿಸಿದ ನಿರ್ಮಿಸಿರುವ ಸಿನಿಮಾವಲ್ಲ. ಬದಲಾಗಿ, ಕಾಂತ ಒಂದು ಕಾಲ್ಪನಿಕ ಕಥೆಯಾಗಿದೆ.

1950 ರ ದಶಕದ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ನಡೆಯುವ ಕಥೆಯಾಗಿದೆ. ನಿರ್ದೇಶಕರೊಬ್ಬರು ಪರಿಚಯಿಸುವ ತಾರಾ ನಟನೊಬ್ಬನ ಸುತ್ತ ಈ ಸಿನಿಮಾದ ಕಥೆ ಹೆಣೆಯಲಾಗಿದೆ. ಈ ಚಿತ್ರದಲ್ಲಿ ಸಮುತಿರಕಣಿ, ರವೀಂದ್ರ ವಿಜಯ್, ವಾಯಪುರಿ, ಗಾಯತ್ರಿ ಶಂಕರ್, ನಿಜಲ್‌ಗಲ್ ರವಿ ಸೇರಿದಂತೆ ಇತರರು ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.