ADVERTISEMENT

ದುಲ್ಕರ್ ಸಲ್ಮಾನ್ ಹೊಸ ಚಿತ್ರಕ್ಕೆ ಜೊತೆಯಾದ ಪೂಜಾ ಹೆಗ್ಡೆ

ಪಿಟಿಐ
Published 11 ಸೆಪ್ಟೆಂಬರ್ 2025, 7:56 IST
Last Updated 11 ಸೆಪ್ಟೆಂಬರ್ 2025, 7:56 IST
<div class="paragraphs"><p>ನಟಿ ಪೂಜಾ ಹೆಗ್ಡೆ</p></div>

ನಟಿ ಪೂಜಾ ಹೆಗ್ಡೆ

   

ಚಿತ್ರ ಕೃಪೆ: ಇನ್‌ಸ್ಟಾಗ್ರಾಮ್‌

ನವದೆಹಲಿ: ನಟ ದುಲ್ಕರ್ ಸಲ್ಮಾನ್ ಅವರ ಮುಂಬರುವ ಚಿತ್ರಕ್ಕೆ ನಟಿ ಪೂಜಾ ಹೆಗ್ಡೆ ನಾಯಕ ನಟಿಯಾಗಿ ಆಯ್ಕೆಯಾಗಿದ್ದಾರೆ.

ADVERTISEMENT

ದುಲ್ಕರ್ ಸಲ್ಮಾನ್ ಅವರ ಇನ್ನೂ ಹೆಸರಿಡದ ತೆಲುಗಿನ #DQ41 ಯೋಜನೆಗೆ ನಟಿ ಪೂಜಾ ಹೆಗ್ಡೆ ಅವರನ್ನು ಸ್ವಾಗತಿಸುತ್ತೇವೆ ಎಂದು ಈ ಚಿತ್ರದ ನಿರ್ಮಾಣ ಸಂಸ್ಥೆ ಎಸ್‌ಎಲ್‌ವಿ ಸಿನಿಮಾಸ್ ತಿಳಿಸಿದೆ.

ವಿಶೇಷ ಎಂದರೆ ಈ ಚಿತ್ರವನ್ನು ತೆಲುಗಿನಲ್ಲಿ ಮಹೇಶ್ ಬಾಬು ಅವರ ಜೊತೆ ಸರ್ಕಾರಿ ವಾರಿ ಪಾಟಾ ಸಿನಿಮಾ ನಿರ್ದೇಶಿಸಿದ್ದ ರವಿ ನೆಲಕುಡತಿ ಅವರು ನಿರ್ದೇಶಿಸುತ್ತಿದ್ದಾರೆ.

ಪೂಜಾ ಹೆಗ್ಡೆ ಅವರು ಸೂರ್ಯ ಅವರ ರೆಟ್ರೊ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ಆ ಸಿನಿಮಾ ಮೇ 1 ರಂದು ಬಿಡುಗಡೆಯಾಗಿತ್ತು.

ಇನ್ನು ದುಲ್ಕರ್ ಸಲ್ಮಾನ್ ಅವರು ಸಿನಿಮಾ ನಿರ್ಮಾಣದ ಜೊತೆ ನಟನೆಯಲ್ಲೂ ಬುಜಿಯಾಗಿದ್ದಾರೆ. ಅವರ ನಿರ್ಮಾಣದ ಲೋಕಾ ಚಾಪ್ಟರ್ 1 ನಲ್ಲಿ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.