ADVERTISEMENT

ಫೆಮಾ ಪ್ರಕರಣ: ನಟಿ ಯಾಮಿಗೆ ಇ.ಡಿ ನೋಟಿಸ್‌ ಜಾರಿ

ಪಿಟಿಐ
Published 2 ಜುಲೈ 2021, 14:23 IST
Last Updated 2 ಜುಲೈ 2021, 14:23 IST
ಯಾಮಿ ಗೌತಮ್‌
ಯಾಮಿ ಗೌತಮ್‌   

ನವದೆಹಲಿ:ವಿದೇಶಿ ವಿನಿಮಯ ಕಾನೂನಿಗೆ ಸಂಬಂಧಿಸಿದ ಫೆಮಾ (ಎಫ್ಇಎಂಎ) ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ನಟಿ ಯಾಮಿ ಗೌತಮ್ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ನೋಟಿಸ್‌ ಜಾರಿಗೊಳಿಸಿದೆ.

32 ವರ್ಷದ ನಟಿ ಯಾಮಿ ಗೌತಮ್ ಅವರಿಗೆಈ ಹಿಂದೆಯೂ ಸಮನ್ಸ್ ಜಾರಿಗೊಳಿಸಲಾಗಿತ್ತು. ಆದರೆ ಅವರು ತನಿಖಾ ಸಂಸ್ಥೆ ಎದುರು ಹಾಜರಾಗಿರಲಿಲ್ಲ. ಯಾಮಿ ಅವರ ಬ್ಯಾಂಕ್ ಖಾತೆಗೆ ₹ 1.5 ಕೋಟಿ ಜಮಾ ಆಗಿರುವುದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಇದೇ 7ರಂದು ದಕ್ಷಿಣ ಮುಂಬೈನ ಕೇಂದ್ರ ತನಿಖಾ ಸಂಸ್ಥೆಯ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ನಲ್ಲಿ ಸೂಚಿಸಲಾಗಿದೆ.

ADVERTISEMENT

ಹಿಂದಿ,ತಮಿಳು, ತೆಗುಲು ಸಿನಿಮಾಗಳಲ್ಲಿ ಯಾಮಿ ಗೌತಮ್ ನಟಿಸಿದ್ದಾರೆ. ಕಳೆದ ತಿಂಗಳು ನಿರ್ಮಾಪಕ ಆದಿತ್ಯ ಧರ್ ಅವರನ್ನು ಯಾಮಿ ವಿವಾಹವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.