
ಎಕ್ಕ ಚಿತ್ರದಲ್ಲಿ ಸಂಜನಾ, ಯುವ
ನಟ ಯುವರಾಜ್ ಕುಮಾರ್ ಅಭಿನಯದ ಎಕ್ಕ ಸಿನಿಮಾ ನವೆಂಬರ್ 13ರಿಂದ ಸ್ಟ್ರೀಮಿಂಗ್ ಆಗುತ್ತಿದೆ ಎಂದು ಸನ್‌ನೆಕ್ಸ್ಟ್ (Sun Nxt) ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮಾಹಿತಿ ನೀಡಿದೆ. ಸಿನಿಮಾದಲ್ಲಿ ನಾಯಕಿಯರಾಗಿ ಸಂಜನಾ ಆನಂದ್ ಹಾಗೂ ಸಂಪದಾ ನಟಿಸಿದ್ದಾರೆ.
ರೋಹಿತ್ ಪದಕಿ ನಿರ್ದೇಶನದ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಹಳ್ಳಿಯಿಂದ ಬೆಂಗಳೂರಿಗೆ ಬರುವ ಯುವಕನಿಗೆ ಎದುರಾಗುವ ಸವಾಲುಗಳನ್ನು ಎದುರಿಸುವ ಭರದಲ್ಲಿ ಭೂಗತ ಲೋಕದ ನಂಟು ಬೆಳೆಸಿಕೊಳ್ಳುವ ಕಥೆಯನ್ನು ನಿರ್ದೇಶಕರು ವಿಭಿನ್ನ ಶೈಲಿಯಲ್ಲಿ ಸಿನಿಮಾದಲ್ಲಿ ತೋರಿಸಿದ್ದಾರೆ.
ಸಿನಿಮಾ ಕಥೆಗಿಂತ ಹೆಚ್ಚಾಗಿ ಹಾಡುಗಳಿಂದಲೇ ಜನಪ್ರೀಯತೆ ಪಡೆದುಕೊಂಡಿತ್ತು. ‘ಎಕ್ಕ ಮಾರ್’ ಹಾಗೂ ‘ಬ್ಯಾಂಗಲ್ ಬಂಗಾರಿ’ ಹಾಡುಗಳು ಪ್ರೇಕ್ಷಕರನ್ನು ರಂಜಿಸಿದ್ದವು. ಇದೀಗ ಸಿನಿಮಾ ಓಟಿಟಿಗೆ ಬರುತ್ತಿರುವ ಕುರಿತು ಸನ್‌ನೆಕ್ಸ್ಟ್ ಅಧಿಕೃತ ಪೇಜ್‌ನಲ್ಲಿ ಸಿನಿಮಾ ಹಾಡಿನ ವಿಡಿಯೋ ಹಾಕಿ ಬಿಡುಗಡೆ ದಿನಾಂಕ ಹೇಳಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.