ತಿರುವನಂತಪುರ: ನಟ ಮೋಹನ್‌ಲಾಲ್ ಅವರ ‘ಎಲ್2: ಎಂಪುರಾನ್’ ಚಿತ್ರದ ವಿರುದ್ಧ ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ (ಆರ್‌ಎಸ್‌ಎಸ್) ತೀವ್ರ ಟೀಕೆ ವ್ಯಕ್ತವಾಗಿರುವ ನಡುವೆ ಚಿತ್ರದಲ್ಲಿ ಕೆಲ ಬದಲಾವಣೆ ಮಾಡಲು ಚಿತ್ರ ನಿರ್ಮಾಪಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಚಿತ್ರದ 17 ವಿವಿಧ ದೃಶ್ಯಗಳಲ್ಲಿ ಬದಲಾವಣೆ ಮಾಡಲು ಯೋಜಿಸಲಾಗಿದ್ದು, ‘ಬಾಬಾ ಬಜರಂಗಿ’ ಎಂದು ಇರುವ ಪಾತ್ರದ ಹೆಸರನ್ನೂ ಬದಲಿಸಲಾಗುತ್ತದೆ. ಮಾರ್ಪಾಡು ಮಾಡಿದ ಬಳಿಕ ಚಿತ್ರವನ್ನು ಸೆನ್ಸಾರ್ ಮಂಡಳಿಗೆ ಕಳುಹಿಸಲಾಗುವುದು ಎಂದು ಚಿತ್ರರಂಗದ ಮೂಲಗಳು ತಿಳಿಸಿವೆ.
ನಿರ್ಮಾಪಕರು ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಸಿನಿಮಾ ಕುರಿತ ಇತ್ತೀಚಿನ ಬೆಳವಣಿಗೆ ಕುರಿತು ಮಾತನಾಡಲು ನಿರಾಕರಿಸಿದ ಚಿತ್ರಕಥೆಗಾರ ಮುರಳಿ ಗೋಪಿ ಅವರು, ‘ನಾನೀಗ ಮೌನವಾಗಿರಲು ನಿರ್ಧರಿಸಿದ್ದೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.