ADVERTISEMENT

‘ಎವರಿಒನ್ ವಾಂಟ್ಸ್ ದಿಸ್’ ಚಿತ್ರ ತೆರೆಗೆ ಶೀಘ್ರ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 1:38 IST
Last Updated 11 ಫೆಬ್ರುವರಿ 2026, 1:38 IST
ಅಕ್ಷರ ಸುರೇಶ್‌
ಅಕ್ಷರ ಸುರೇಶ್‌   

ಬಹುತೇಕ ಹೊಸಬರಿಂದಲೇ ‘ಎವರಿಒನ್ ವಾಂಟ್ಸ್ ದಿಸ್’ ಚಿತ್ರದ ‘ವಿಭಿನ್ನ ಅಲೆಗಳ’ ಎಂಬ ಹಾಡು ಇತ್ತೀಚೆಗಷ್ಟೆ ಬಿಡುಗಡೆಗೊಂಡಿದೆ. ನಹೇಶ್ ಪೋಲ್ ಈ ಚಿತ್ರದ ನಿರ್ದೇಶನದ ಜತೆಗೆ ನಾಯಕನಾಗಿಯೂ ನಟಿಸಿದ್ದಾರೆ. 

‘ನಮ್ಮ ನಿರ್ಮಾಣ ಸಂಸ್ಥೆಯಿಂದ 2026ರಲ್ಲಿ ಮೂರು ಸಿನಿಮಾಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಿದ್ದೇವೆ. ‘ಎವರಿಒನ್ ವಾಂಟ್ಸ್ ದಿಸ್’ ತೊಂಬತ್ತು ನಿಮಿಷಗಳ ಅವಧಿಯ ಸಿನಿಮಾ. ದುಡ್ಡಿನ ಆಸೆಗಾಗಿ ವಜ್ರ ದರೋಡೆ ಮಾಡಿದಾಗ, ಅದರಿಂದಾಗುವ ಅನಾಹುತಗಳನ್ನು ಕಾಮಿಡಿ ಹಾಗೂ ಥ್ರಿಲ್ಲರ್ ಮಾದರಿಯಲ್ಲಿ ಹೇಳಿದ್ದೇವೆ. ಶೀಘ್ರದಲ್ಲಿಯೇ ಚಿತ್ರ ತೆರೆಗೆ ಬರಲಿದೆ’ ಎಂದರು ನಿರ್ದೇಶಕ.

ರ‍್ಯಾಡಿಕಲ್ ಕಾನ್ಸೆಪ್ಟ್‌ ಸ್ಟುಡಿಯೊ ಬಂಡವಾಳ ಹೂಡಿದೆ. ಚಿತ್ರಕ್ಕೆ ನಿರ್ದೇಶಕರೇ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಒಟ್ಟು ಆರು ಹಾಡುಗಳಿವೆ. ‘ವಿಭಿನ್ನ ಅಲೆಗಳ’ ಹಾಡು ಕನ್ನಡ, ಇಂಗ್ಲೀಷ್, ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಗೊಂಡಿದೆ. ಸಾಗರ್‌ ಮೂರ್ತಿ ಛಾಯಾಚಿತ್ರಗ್ರಹಣವಿದೆ. ಅಕ್ಷರ ಸುರೇಶ್ ನಾಯಕಿ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.