ADVERTISEMENT

ಸಿನಿಮಾ ರಂಗಕ್ಕೆ ಕಾಲಿಟ್ಟ ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ!

ಈ ವಿಷಯವನ್ನು ಸ್ವತಃ ರೊನಾಲ್ಡೊ ಅವರೇ ತಮ್ಮ ಸಾಮಾಜಿಕ ತಾಣಗಳಲ್ಲಿ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಏಪ್ರಿಲ್ 2025, 9:48 IST
Last Updated 11 ಏಪ್ರಿಲ್ 2025, 9:48 IST
ಕ್ರಿಸ್ಟಿಯಾನೊ ರೊನಾಲ್ಡೊ
ಕ್ರಿಸ್ಟಿಯಾನೊ ರೊನಾಲ್ಡೊ   

ಬೆಂಗಳೂರು: ಖ್ಯಾತ ಫುಟ್ಬಾಲ್ ತಾರೆ ಪೊರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದಾರೆ. 24x7 ಫುಟ್ಬಾಲ್ ಅನ್ನೇ ಜಪಿಸುವ ಈ ಜಗದ್ವಿಖ್ಯಾತ ಆಟಗಾರನ ಹೊಸ ಹೆಜ್ಜೆ ಅವರ ಅಭಿಮಾನಿಗಳಿಗೆ ಅಚ್ಚರಿ ನೀಡಿದೆ.

ಈ ವಿಷಯವನ್ನು ಸ್ವತಃ ರೊನಾಲ್ಡೊ ಅವರೇ ತಮ್ಮ ಸಾಮಾಜಿಕ ತಾಣಗಳಲ್ಲಿ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊ ಜೊತೆಗೆ ಒಂದು ನೋಟ್‌ ಅನ್ನು ಅವರು ಹಂಚಿಕೊಂಡಿದ್ದಾರೆ.

ಕ್ರಿಸ್ಟಿಯಾನೊ ರೊನಾಲ್ಡೊ ಅವರು ತಮ್ಮ ಹೊಸ ಪ್ರೊಡಕ್ಷನ್ ಹೌಸ್‌ಗೆ ‘‘UR MARV‘‘ ಎಂದು ಹೆಸರಿಟ್ಟಿದ್ದು ಬ್ರಿಟನ್ ಮೂಲದ ‘ಎಕ್ಸ್ ಮೆನ್’, ‘ಕಿಂಗ್ಸ್‌ಮನ್‘ ಖ್ಯಾತಿಯ ಹಾಲಿವುಡ್ ನಿರ್ದೇಶಕ ಹಾಗೂ ನಿರ್ಮಾಪಕ ಮ್ಯಾಥ್ಯೂ ವುಗಾನ್ ಜೊತೆ ಕೈ ಜೋಡಿಸಿದ್ದಾರೆ.

ADVERTISEMENT

‘ಅವರಿಗೆ ಫುಟ್ಬಾಲ್ ಇಷ್ಟ, ನನಗೆ ಸಿನಿಮಾ ಇಷ್ಟ, ಕಥೆ ಹೇಳೋಕೆ ನಾವು ರೆಡಿ, ನೋಡುವುದಕ್ಕೆ ನೀವು ರೆಡಿ ಆಗಿ. ಹಾಲಿವುಡ್ ಸ್ಟಾರ್‌ಗಳ ಜೊತೆ ನಿಮ್ಮ ಮುಂದೆ ಎಂದು ರೊನಾಲ್ಡೊ ವಿಡಿಯೊ ಹಂಚಿಕೊಂಡಿದ್ದಾರೆ.

ಈಗಾಗಲೇ ಎರಡು ಆಕ್ಷನ್ ಸಿನಿಮಾಗಳ ನಿರ್ಮಾಣಕ್ಕೆ ತಯಾರಿ ನಡೆದಿದೆ. ಮೂರನೆಯದ್ದು ಬರಲಿದೆ. ನಮ್ಮ ಮೊದಲ ಕಾಣಿಕೆಯ ಘೋಷಣೆ ಶೀಘ್ರದಲ್ಲೇ ಮಾಡಲಿದ್ದೇವೆ ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು ರೊನಾಲ್ಡೊ ಅವರು ಯೂಟ್ಯೂಬ್ ಚಾನಲ್ ಆರಂಭಿಸಿದ್ದರು. ಅದಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ರೊನಾಲ್ಡೊ ಮತ್ತೊಂದು ಹೊಸ ಹೆಜ್ಜೆ ಇಟ್ಟಿದ್ದಾರೆ.

ರೊನಾಲ್ಡೊ ಅವರು ಫುಟ್‌ಬಾಲ್‌ ಇತಿಹಾಸದಲ್ಲಿ 900 ಗೋಲು ದಾಖಲಿಸಿದ ಏಕೈಕ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.