ADVERTISEMENT

ಪುನೀತ್ ‘ಜೇಮ್ಸ್‌’ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಲು ವ್ಯಾಪಕ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2022, 9:41 IST
Last Updated 16 ಮಾರ್ಚ್ 2022, 9:41 IST
ಜೇಮ್ಸ್‌
ಜೇಮ್ಸ್‌   

ಬೆಂಗಳೂರು: ನಾಳೆ ಬಿಡುಗಡೆಯಾಗಲಿರುವ (ಮಾರ್ಚ್ 17) ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ ಜೇಮ್ಸ್‌ ಸಿನಿಮಾ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಈ ಸಿನಿಮಾ ಮೂಲಕ ಅಗಲಿದ ಅಪ್ಪುವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.

ಇನ್ನೊಂದೆಡೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಂತೆ ಜೇಮ್ಸ್ ಸಿನಿಮಾಕ್ಕೂ ಕೂಡ ತೆರಿಗೆ ವಿನಾಯಿತಿ ಘೋಷಣೆ ಮಾಡಬೇಕು ಎಂಬ ಒತ್ತಾಯ ಕನ್ನಡಿಗರಿಂದ ಸಾಕಷ್ಟು ಕೇಳಿ ಬರುತ್ತಿದೆ.

ಈ ಹಿನ್ನೆಲೆಯಲ್ಲಿ ಇಂದು ಟ್ವೀಟ್ ಮಾಡಿರುವ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಧುರೀಣ ಎಂ.ಬಿ ಪಾಟೀಲ ಅವರು ಜೇಮ್ಸ್ ಸಿನಿಮಾಕ್ಕೂ ಕರ್ನಾಟಕ ಸರ್ಕಾರ ತೆರಿಗೆ ವಿನಾಯಿತಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

‘ನಮ್ಮೆಲ್ಲರ ಪ್ರೀತಿಯ ಅಪ್ಪು, ಡಾ. ಪುನೀತ್ ರಾಜ್‌ಕುಮಾರ್ ಅಭಿನಯದ ಸಿನಿಮಾ ಇದೇ ಮಾರ್ಚ್ 17ರಂದು ಬಿಡುಗಡೆಯಾಗುತ್ತಿದೆ. ಅಂದು ಪುನೀತ್ ಅವರ ಜನ್ಮದಿನ ಕೂಡ. ಈ ಚಿತ್ರವನ್ನು ನೋಡಲು ರಾಜ್ಯವೇ ಕಾತುರದಿಂದ ಕಾಯುತ್ತಿದೆ. ಈ ಚಿತ್ರವನ್ನು ತೆರಿಗೆಮುಕ್ತ ಮಾಡಬೇಕೆಂದುಒತ್ತಾಯ ಮಾಡುತ್ತೇನೆ’ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ.

ಇನ್ನು ಜೇಮ್ಸ್ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಅಪ್ಪು ಅಭಿಮಾನಿಗಳು ಕೇವಲ ಕರ್ನಾಟಕ ಮಾತ್ರವಲ್ಲದೇ ದೇಶ ವಿದೇಶದಲ್ಲೂ ತುದಿಗಾಲ ಮೇಲೆ ನಿಂತಿದ್ದಾರೆ.

ಚೇತನ್‌ ಕುಮಾರ್‌ ನಿರ್ದೇಶನದ ‘ಜೇಮ್ಸ್‌’, ಕರ್ನಾಟಕದಲ್ಲೇ 400ಕ್ಕೂ ಅಧಿಕ ಏಕಪರದೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ‘ಜೇಮ್ಸ್‌’ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿದೆ. ತಮ್ಮ ಜನ್ಮದಿನದಂದೇ ಈ ಚಿತ್ರ ಬಿಡುಗಡೆ ಪುನೀತ್‌ ಅವರ ಆಸೆಯಾಗಿತ್ತು.

ಈ ಆಸೆ ಪೂರೈಸುವುದು ನಮ್ಮ ಜವಾಬ್ದಾರಿಯಾಗಿತ್ತು. ಅಮೆರಿಕದಲ್ಲಿ 72 ಕೇಂದ್ರಗಳು, ಕೆನಡಾದಲ್ಲಿ 40 ಕೇಂದ್ರಗಳು ಸೇರಿದಂತೆ 21 ದೇಶಗಳಲ್ಲಿ ‘ಜೇಮ್ಸ್‌’ ಬಿಡುಗಡೆಯಾಗುತ್ತಿದೆ. ಮೈಸೂರಿನಲ್ಲಿ ಇರುವ ಐದು ಏಕಪರದೆ ಚಿತ್ರಮಂದಿರಗಳಲ್ಲಿ ಹಾಗೂ ಮೂರು ಮಲ್ಟಿಪ್ಲೆಕ್ಸ್‌ನಲ್ಲಿ ದಿನಕ್ಕೆ 17–18 ಪ್ರದರ್ಶನಗಳ ಟಿಕೆಟ್‌ ಮಾರಾಟವಾಗಿವೆ’ ಎಂದಿದ್ದಾರೆ ಚೇತನ್‌ ಕುಮಾರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.