ADVERTISEMENT

13ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ತೆರೆ: ಪ್ರಶಸ್ತಿ ವಿತರಣೆ

‘ದೊಡ್ಡಹಟ್ಟಿ ಬೋರೇಗೌಡ’, ‘ಪಿಂಕಿ ಎಲ್ಲಿ’ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಗರಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2022, 6:50 IST
Last Updated 11 ಮಾರ್ಚ್ 2022, 6:50 IST
‘ಪಿಂಕಿ ಎಲ್ಲಿ’ ಚಿತ್ರತಂಡಕ್ಕೆ ಪ್ರಶಸ್ತಿ ಪ್ರದಾನ ಮಾಡಿದ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌. ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌, ನಿರ್ದೇಶಕ ಪೃಥ್ವಿ ಕೋಣನೂರು ಇದ್ದಾರೆ. –ಪ್ರಜಾವಾಣಿ ಚಿತ್ರ
‘ಪಿಂಕಿ ಎಲ್ಲಿ’ ಚಿತ್ರತಂಡಕ್ಕೆ ಪ್ರಶಸ್ತಿ ಪ್ರದಾನ ಮಾಡಿದ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌. ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌, ನಿರ್ದೇಶಕ ಪೃಥ್ವಿ ಕೋಣನೂರು ಇದ್ದಾರೆ. –ಪ್ರಜಾವಾಣಿ ಚಿತ್ರ   

ಬೆಂಗಳೂರು: 13ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ2020ನೇ ಸಾಲಿನ ಕನ್ನಡ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ‘ಪಿಂಕಿ ಎಲ್ಲಿ’, ಇದೇ ವಿಭಾಗದ 2021ನೇ ಸಾಲಿನ ಚಿತ್ರಗಳಲ್ಲಿ ರಘು ಕೆ.ಎಂ. ನಿರ್ದೇಶನದ ‘ದೊಡ್ಡಹಟ್ಟಿ ಬೋರೇಗೌಡ’ ಸಿನಿಮಾಗಳು ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದವು.

ಮಲ್ಲೇಶ್ವರದ ಜೆ.ಎನ್‌.ಟಾಟಾ ಆಡಿಟೋರಿಯಂನಲ್ಲಿ ಗುರುವಾರ ನಡೆದ ಚಿತ್ರೋತ್ಸವದ ಸಮಾರೋಪದಲ್ಲಿ ವಿವಿಧ ವಿಭಾಗಗಳ ಅತ್ಯುತ್ತಮ ಸಿನಿಮಾಗಳಿಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಪ್ರಶಸ್ತಿ ಪ್ರದಾನ ಮಾಡಿದರು. ಕೋವಿಡ್‌ ಕಾರಣದಿಂದಾಗಿ ಕಳೆದ ಎರಡು ವರ್ಷ ಚಿತ್ರೋತ್ಸವ ನಡೆದಿರಲಿಲ್ಲ. ಹೀಗಾಗಿ ಈ ವರ್ಷ 2020–2021ನೇ ಸಾಲಿನ ಪ್ರಶಸ್ತಿಗಳನ್ನೂಘೋಷಿಸಲಾಯಿತು.

‘ಪಿಂಕಿ ಎಲ್ಲಿ’ ಚಿತ್ರವು ಇತ್ತೀಚೆಗಷ್ಟೇ ನ್ಯೂಯಾರ್ಕ್‌ ಇಂಡಿಯನ್‌ ಚಲನಚಿತ್ರೋತ್ಸವದಲ್ಲಿ ಎರಡು ಪ್ರಶಸ್ತಿಗಳನ್ನು ಗೆದ್ದಿತ್ತು.

ADVERTISEMENT

ಅತ್ಯುತ್ತಮ ಕನ್ನಡ ಮನೋರಂಜನಾ ಚಲನಚಿತ್ರಗಳ ಸ್ಪರ್ಧಾ ವಿಭಾಗದಲ್ಲಿ, 2020ನೇ ಸಾಲಿನ ಚಿತ್ರಗಳ ಪೈಕಿ ಅಶೋಕ್‌ ಕೆ.ಎಸ್‌. ನಿರ್ದೇಶನದ ‘ದಿಯಾ’ ಹಾಗೂ 2021ನೇ ಸಾಲಿನ ಚಿತ್ರಗಳ ಪೈಕಿ ಸಂತೋಷ್‌ ಆನಂದರಾಮ್‌ ನಿರ್ದೇಶನದ, ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಯುವರತ್ನ’ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.