ADVERTISEMENT

‘ಕೌಂತೇಯ’ ಚಿತ್ರದಲ್ಲಿ ಖಳನಾದ ಮನೋರಂಜನ್‌

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 0:18 IST
Last Updated 3 ಡಿಸೆಂಬರ್ 2025, 0:18 IST
ಮನೋರಂಜನ್‌, ಅನನ್ಯ
ಮನೋರಂಜನ್‌, ಅನನ್ಯ   

ಮರ್ಡರ್ ಮಿಸ್ಟ್ರಿ ಕಥಾಹಂದರವಿರುವ ‘ಕೌಂತೇಯ’ ಚಿತ್ರದಲ್ಲಿ ಮನೋರಂಜನ್‌ ರವಿಚಂದ್ರನ್‌ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿ.ಕೆ.ಚಂದ್ರಹಾಸ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರದ ಶೇಕಡ 70ರಷ್ಟು ಚಿತ್ರೀಕರಣ ಮುಕ್ತಾಯಗೊಂಡಿದೆ ಎಂದು ಚಿತ್ರತಂಡ ಹೇಳಿದೆ. 

ಅಚ್ಯುತ್‌ ಕುಮಾರ್‌ ಪ್ರಮುಖ ಪಾತ್ರದಲ್ಲಿರುವ ಚಿತ್ರ ಮೈಸೂರಿನ ಸುತ್ತಮುತ್ತ ಚಿತ್ರೀಕರಣಗೊಳ್ಳುತ್ತಿದೆ. ‘ಈ ಸಿನಿಮಾದಲ್ಲಿ ಅಚ್ಯುತ್ ಕುಮಾರ್‌ ಸಕಾರಾತ್ಮಕ ಪಾತ್ರದಲ್ಲಿ ಕಾಣಿಸಿಕೊಂಡರೆ, ಇದೇ ಮೊದಲ ಬಾರಿಗೆ ಮನೋರಂಜನ್‌ ಖಳನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅವರ ಗೆಟಪ್ ಸಹ ಭಿನ್ನವಾಗಿದ್ದು, ಯಾಕಾಗಿ ಅವರು ಈ ಪಾತ್ರ ನಿಭಾಯಿಸುತ್ತಿದ್ದಾರೆ ಎಂಬುದನ್ನು ಚಿತ್ರದಲ್ಲಿಯೇ ನೋಡಬೇಕು’ ಎಂದಿದ್ದಾರೆ ನಿರ್ದೇಶಕ.

ಶರಣ್ಯ ಶೆಟ್ಟಿ ಚಿತ್ರದ ನಾಯಕಿ. ಅಚ್ಯುತ್ ಕುಮಾರ್ ಮಗಳ ಪಾತ್ರದಲ್ಲಿ ಶರಣ್ಯ ಕಾಣಿಸಿಕೊಂಡಿದ್ದಾರೆ. ಮನೋರಂಜನ್‌ಗೆ ಜೋಡಿಯಾಗಿ ಅನನ್ಯ ರಾಜಶೇಖರ್ ನಟಿಸುತ್ತಿದ್ದಾರೆ. ಎಸಿಪಿಯಾಗಿ ಪ್ರಿಯಾಂಕಾ ತಿಮ್ಮೇಶ್ ಕಾಣಿಸಿಕೊಂಡಿದ್ದಾರೆ. 

ADVERTISEMENT

ಸುರೇಶ್ ಕುಮಾರ್ ಬಂಡವಾಳ ಹೂಡಿದ್ದಾರೆ. ಹರಿ. ಪಿ.ಎಲ್.ರವಿ ಛಾಯಾಚಿತ್ರಗ್ರಹಣ ಈ ಚಿತ್ರಕ್ಕಿದೆ.

‘ಕೌಂತೇಯ ಅಂದರೆ ಕುಂತಿಪುತ್ರ ಎಂದರ್ಥ. ಈ ಚಿತ್ರದಲ್ಲಿ ಕೌಂತೇಯ ಯಾರು ಎಂಬುದೇ ಕುತೂಹಲದ ಸಂಗತಿ. ಮರ್ಡರ್ ಮಿಸ್ಟ್ರಿ ಕಥೆಯನ್ನು ಕೌತುಕವಾಗಿ ತೆಗೆದುಕೊಂಡು ಹೋಗಿದ್ದೇವೆ. ನಿರೂಪಣೆಯಲ್ಲೂ ಭಿನ್ನತೆ ಇದೆ’ ಎಂದಿದೆ ಚಿತ್ರತಂಡ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.