
ಪ್ರಜಾವಾಣಿ ವಾರ್ತೆ
ಕುಂಜಾರ ಫಿಲ್ಮ್ಸ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ ‘ಕಬಂಧ’ ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದೆ. ಕೆಲವು ವರ್ಷಗಳ ಹಿಂದೆ ರಾಜ್ಯಾದ್ಯಂತ ಭಯಹುಟ್ಟಿಸಿದ್ದ ನೈಜ ಘಟನೆಯೊಂದನ್ನು ಆಧರಿಸಿರುವ ಈ ಚಿತ್ರವನ್ನು ಸತ್ಯನಾಥ್ ನಿರ್ದೇಶಿಸಿದ್ದಾರೆ.
ಪ್ರಸಾದ್ ವಸಿಷ್ಠ, ಪ್ರಿಯಾಂಕ ಮಲ್ಲಾದಿ ಮುಖ್ಯಭೂಮಿಕೆಯಲ್ಲಿದ್ದಾರೆ. ಸತ್ಯಜಿತ್ ಸಿದ್ದಕಾಂತ್ ಛಾಯಾಚಿತ್ರಗ್ರಹಣ, ಸಾನಿತೇಜ್ ಸಂಗೀತ ಚಿತ್ರಕ್ಕಿದೆ. ದಾವಣಗೆರೆ, ತುಮಕೂರು ಮುಂತಾದೆಡೆಗಳಲ್ಲಿ ಚಿತ್ರೀಕರಣಗೊಂಡಿದೆ.
ಕಿಶೋರ್ ಕುಮಾರ್, ಅವಿನಾಶ್, ನಿರ್ದೇಶಕ ಯೋಗರಾಜ್ ಭಟ್, ವಂದನ, ಪ್ರಶಾಂತ್ ಸಿದ್ಧಿ ಮುಂತಾದವರು ತಾರಾಗಣದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.