ADVERTISEMENT

Namo Bharath Cinema | ಸೈನಿಕನ ಕಥೆ ಹೇಳುವ ಚಿತ್ರ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2024, 10:44 IST
Last Updated 25 ಫೆಬ್ರುವರಿ 2024, 10:44 IST
ಸುಷ್ಮಾರಾಜ್
ಸುಷ್ಮಾರಾಜ್   

ದೇಶದ ಗಡಿ ಕಾಯುವ ಸೈನಿಕನ ಕಥೆ ಹೊಂದಿರುವ ‘ನಮೋ ಭಾರತ್‍’ ಚಿತ್ರದ ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ. ಈ ಚಿತ್ರವನ್ನು ಶ್ರೀ ಚೌಡೇಶ್ವರಿ ಫಿಲ್ಮ್ಸ್‌ ಮೂಲಕ ರಮೇಶ್ ಎಸ್.ಪರವಿನಾಯ್ಕರ್ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ.

ಚಿತ್ರತಂಡಕ್ಕೆ ಶುಭ ಹಾರೈಸಿ ಮಾತನಾಡಿದ ಸಾಹಿತಿ ದೊಡ್ಡರಂಗೇಗೌಡ‌, ‘ಇದೊಂದು ಅಪ್ಪಟ ದೇಶಪ್ರೇಮದ ಕಥೆ. ನಾನೂ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದೇನೆ. ರೈತರ ಸಮಸ್ಯೆಯ ಬಗ್ಗೆಯೂ ಹೇಳಲಾಗಿದೆ’ ಎಂದರು. 

‘ನಾನು ಕೆಳದಿ ಚೆನ್ನಮ್ಮನ ವಂಶಸ್ಥ. ಈ ಹಿಂದೆ ‘ಗಾಂಧಿ ಕನಸು’ ಎಂಬ ಚಿತ್ರ ಮಾಡಿದ್ದೆ. ‘ನಮೋ ಭಾರತ್‍’  ಕಾಶ್ಮೀರದಲ್ಲಿ ಚಿತ್ರೀಕರಣಗೊಂಡಿದೆ. ಮಾ.1ಕ್ಕೆ ತೆರೆಗೆ ಬರಲಿದೆ’ ಎಂದರು ನಿರ್ದೇಶಕ. 

ADVERTISEMENT

ಈ ಚಿತ್ರಕ್ಕೆ ಎ.ಟಿ. ರವೀಶ್ ಸಂಗೀತ, ಗೌರಿ ವೆಂಕಟೇಶ್ ಛಾಯಾಚಿತ್ರಗ್ರಹಣವಿದೆ. ಸೋನಾಲಿ ಪಂಡಿತ್, ಸುಷ್ಮಾ ರಾಜ್‍, ಭವ್ಯ ಮುಂತಾದವರು ಚಿತ್ರದಲ್ಲಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.