ADVERTISEMENT

Raja Rani Kannada Movie: ಹೊಸಬರ ‘ರಾಜರಾಣಿ’

​ಪ್ರಜಾವಾಣಿ ವಾರ್ತೆ
Published 20 ಜುಲೈ 2023, 0:27 IST
Last Updated 20 ಜುಲೈ 2023, 0:27 IST
ರಿತ್ಯಾ ಶೆಟ್ಟಿ
ರಿತ್ಯಾ ಶೆಟ್ಟಿ   

‘ರಾಜರಾಣಿ’ ಎಂಬ ಶೀರ್ಷಿಕೆಯಡಿಯಲ್ಲಿ ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋ ಎಲ್ಲವೂ ಬಂದಿವೆ. ಇದೀಗ ಮತ್ತೆ ‘ರಾಜರಾಣಿ’ ಶಿರ್ಷಿಕೆಯನ್ನೇ ಹೊಂದಿರುವ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ‘ಇಟ್ಟಿಗೆ ಗೂಡಿನಲ್ಲಿ ರಾಜರಾಣಿ’ ಎಂಬ ಅಡಿಬರಹವಿದೆ. ಈ ಹಿಂದೆ ಕನ್ನಡ ಮತ್ತು ತಮಿಳಿನ ಕೆಲ ಚಿತ್ರಗಳಲ್ಲಿ ನಟಿಸಿ ಅನುಭವ ಹೊಂದಿರುವ ಬಳ್ಳಾರಿ ಮೂಲದ ರಣಧೀರ್ ಚಿತ್ರದ ನಾಯಕ ಮತ್ತು ನಿರ್ದೇಶಕ.

‘ಇಬ್ಬರು ನಾಯಕರಿದ್ದಾರೆ. ನಾಯಕಿ ಕಾಣೆಯಾಗುವುದರ ಸುತ್ತ ಕಥೆ ಸಾಗಲಿದೆ. ಕುತೂಹಲ ಹಾಗೂ ಪ್ರೀತಿಯನ್ನು ಒಳಗೊಂಡ ಕುಟುಂಬ ಸಮೇತ ನೋಡಬಹುದಾದ ಚಿತ್ರವಾಗಿದೆ. ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಮುಗಿದಿದ್ದು, ಸೆನ್ಸಾರ್‌ಗೆ ಹೋಗಿದೆ. ಶೀಘ್ರದಲ್ಲಿ ಬಿಡುಗಡೆ ಮಾಡಲು ಆಲೋಚಿಸುತ್ತಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ರಣಧೀರ್.

ವಿಜಯ್‌ ಬಳ್ಳಾರಿ ಮತ್ತು ನೇತ್ರಾವತಿ ಮಲ್ಲೇಶ್, ಮಧುಸೂದನ್, ಲೀಲಾ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರಿತನ್ಯಾ ಶೆಟ್ಟಿ ಚಿತ್ರದ ನಾಯಕಿ. ಗಿರಿಜಾ ಲೋಕೇಶ್, ಶೋಭರಾಜ್, ಬಿರಾದಾರ್, ಕಿಲ್ಲರ್‌ ವೆಂಕಟೇಶ್‌ ಮುಂತಾದವರು ನಟಿಸಿದ್ದಾರೆ. ಸುಧನ್‌ ಪ್ರಕಾಶ್ ಸಂಗೀತ, ಮಧು ಛಾಯಾಗ್ರಹಣ, ನಿಶಿತ್‌ ಪೂಜಾರಿ ಸಂಕಲನ ಚಿತ್ರಕ್ಕಿದೆ. ಬೆಂಗಳೂರು, ಚಿಕ್ಕಮಗಳೂರು, ಮಂಗಳೂರು, ಕೋಲಾರ, ಮಾಲೂರಿನಲ್ಲಿ ಚಿತ್ರೀಕರಣ ನಡೆದಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.