ADVERTISEMENT

ಮಹಾರಾಷ್ಟ್ರ, ಹರಿಯಾಣ ಚುನಾವಣೆ: ಮತ ಹಾಕಿದ ಸಿನಿಮಾ ಸ್ಟಾರ್‌ಗಳು...

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2019, 7:33 IST
Last Updated 21 ಅಕ್ಟೋಬರ್ 2019, 7:33 IST
ಮಾಧುರಿ ದೀಕ್ಷಿತ್‌
ಮಾಧುರಿ ದೀಕ್ಷಿತ್‌   

ನವದೆಹಲಿ: ಮಹಾರಾಷ್ಟ್ರದ 288 ಮತ್ತು ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು ಬಾಲಿವುಡ್‌ನ ಸಿನಿಮಾ ನಟ ನಟಿಯರು ಮತ ಚಲಾವಣೆ ಮಾಡಿದರು.

ಹರಿಯಾಣದ ಹಿಸಾರ್‌ನಲ್ಲಿ ಟಿಕ್‌ ಟಾಕ್‌ ಸ್ಟಾರ್‌ ಹಾಗೂ ಅದಂಪುರ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋನಾಲಿ ಫೋಗಟ್‌ ಮತಚಲಾವಣೆ ಮಾಡಿದರು.

ನಟರಾದ ಮಧುರ್ ಭಂಡಾರ್ಕರ್‌, ವರುಣ್ ಧವನ್‌, ಜಾನ್‌ ಅಬ್ರಾಹಂ ಅವರು ಮುಂಬೈನಲ್ಲಿ ಮತ ಹಾಕಿದರು.

ADVERTISEMENT

ಮುಂಬೈನ ಲಾತುರ್‌ನಲ್ಲಿ ನಟ ರಿತೇಶ್‌ ದೇಶ್‌ಮುಖ್ ಹಾಗೂ ನಟಿ ಜೆನಿಲಿಯಾ ಡಿಸೋಜಾ ಮತ ಚಲಾವಣೆ ಮಾಡಿದರು.

ಪಶ್ಚಿಮ ಬಾಂದ್ರದಲ್ಲಿ ನಟಿ ಮಾಧುರಿ ದೀಕ್ಷಿತ್‌ ಮತ ಹಾಕಿದರು.

ಮರಾಠಿ ಸಿನಿಮಾದ ಹಿರಿಯ ನಟಿ ಶುಭಾ ಖೋಟೆ, ನಟ ರವಿ ಕಿಶನ್‌ ಹಾಗೂ ನಟಿ ಪದ್ಮಿನಿ ಕೊಲ್ಲಾಪುರಿ ಅವರು ಮುಂಬೈನ ಅಂದೇರಿಯಲ್ಲಿ ಮತ ಚಲಾವಣೆ ಮಾಡಿದರು.

ಪಶ್ಚಿಮ ಅಂದೇರಿಯಲ್ಲಿ ಬಾಲಿವುಡ್‌ ಹಿರಿಯ ನಟ ಗೋವಿಂದ್‌ ಹಾಗೂ ಅವರ ಪತ್ನಿ ಸುನೀತಾ ಮತ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.