ADVERTISEMENT

ʼಮಟ್ಟು ಕಿ ಸೈಕಲ್’ ಏರಿದ ಝಾ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 10:08 IST
Last Updated 23 ನವೆಂಬರ್ 2020, 10:08 IST
ಪ್ರಕಾಶ್‌ ಝಾ
ಪ್ರಕಾಶ್‌ ಝಾ   

ಮಟ್ಟುವಿನ ಸೈಕಲ್‌ ಏರಿ ಸಿದ್ಧವಾಗಿದ್ದಾರೆ ಬಾಲಿವುಡ್‌ ನಿರ್ಮಾಪಕ ನಿರ್ದೇಕ ಪ್ರಕಾಶ್‌ ಝಾ. ಎಂ.ಘನಿ ನಿರ್ದೇಶನದಈ ಚಿತ್ರ ದಿನಗೂಲಿ ಕಾರ್ಮಿಕನೊಬ್ಬನ ಬವಣೆಯನ್ನು ತೆರೆದಿಡುವ ಪ್ರಯತ್ನ ಮಾಡಿದೆ.

ತನ್ನ ಕುಟುಂಬವನ್ನು ಸಾಕಲು ಪರದಾಡುವ ಮಟ್ಟುವನ್ನು ವ್ಯವಸ್ಥೆ ಎಷ್ಟು ಪರೀಕ್ಷಿಸಿ ಸತಾಯಿಸುತ್ತದೆ ಎಂಬುದು ಚಿತ್ರದ ತಿರುಳು ಎಂದು ಝಾ ಹೇಳಿಕೊಂಡಿದ್ದಾರೆ.
ಕೆಲಸಕ್ಕೆ ಹೋಗಲು ಒಂದು ಹಳೆಯ ಸೈಕಲ್‌ ಬಳಸುತ್ತಿದ್ದ ಮಟ್ಟು, ಅದನ್ನು ಬದಲಾಯಿಸಿ ಹೊಸದನ್ನು ಕೊಳ್ಳಲು ನಿರ್ಧರಿಸುತ್ತಾನೆ. ಉಳಿತಾಯದ ಹಣದಲ್ಲಿ ಕೊಳ್ಳಬಹುದೇ ಎಂಬುದು ಅವನ ಪ್ರಯತ್ನ. ಅದು ಸಾಧ್ಯವಾಗುತ್ತದೆಯೇ ಎಂಬುದಕ್ಕೆ ʼಮಟ್ಟು ಕಿ ಸೈಕಲ್‌’ ಉತ್ತರಿಸುತ್ತದೆ.

ಘನಿ ಅವರ ಕಥೆಗೆ ಝಾನಾಯಕನಾಗಿ ಜೀವ ತುಂಬುತ್ತಿದ್ದಾರೆ.

ADVERTISEMENT

ಸಿನಿಜಗತ್ತಿನ ವೇಗದ ಬೆಳೆವಣಿಗೆಯ ನಡುವೆ ಝಾ ಅವರಿಗೊಂದು ಬೇಸರವಿದೆ. ನಾವು ಪ್ರಗತಿಯ ಭರಾಟೆಯ ನೆರಳಿನಲ್ಲಿ ಸಣ್ಣ ಮತ್ತು ಕೆಳಮಧ್ಯಮ ವರ್ಗದ ಜನರ ಕತೆಗಳನ್ನೇ ಮರೆಯುತ್ತಿದ್ದೇವೆ. ನಿರ್ಮಾಣ ನಿವೇಶನಗಳಲ್ಲಿ ಫ್ಲೈಓವರ್‌ ಕೆಳಗೆ, ಗುಡಿಸಲುಗಳಲ್ಲಿ ವಾಸಿಸುವ ಜನರ ಬಗ್ಗೆ ಯೋಚಿಸುವುದೇ ಇಲ್ಲ. ಈ ಕಥೆ ನನಗೆ ನನ್ನದೇ ಚಿತ್ರ ದಾಮುಲ್‌ (1985)ನ್ನು ನೆನಪಿಸಿತು. ಅದು ದಾಮುಲ್‌ ಎಂಬ ಜೀತ ಕಾರ್ಮಿಕನ ಕತೆ. ಅಲ್ಲಿ ತನ್ನ ಮಾಲೀಕನಿಗಾಗಿ ಕಳ್ಳತನಕ್ಕೂ ಮುಂದಾಗುತ್ತಾನೆ. ಮುಂದೆ ಇದು ಅನೇಕ ಸಾಮಾಜಿಕ ರಾಜಕೀಯ ವಿದ್ಯಮಾನಗಳಿಗೆ ಕಾರಣವಾಗುವ ಕಥೆ ಅದು ಎಂದು ಸ್ಮರಿಸಿದರು ಅವರು. ಝಾ ಅವರ ಅನೇಕ ಚಿತ್ರಗಳು ಸಾಮಾಜಿಕ ರಾಜಕೀಯ ವಿದ್ಯಮಾನಗಳ ಸುತ್ತಲಿನ ವಸ್ತುವನ್ನೇ ಹೊಂದಿವೆ.

ಈ ಚಿತ್ರ ದ ಪಾತ್ರಕ್ಕಾಗಿ ಝಾಅವರು ಮಥುರಾದಲ್ಲಿ 20 ದಿನಗಳ ತಯಾರಿ ನಡೆಸಿದ್ದರಂತೆ. ಚಿತ್ರದಲ್ಲಿ ಸ್ಥಳೀಯ ರಂಗಕರ್ಮಿಗಳನ್ನು ಬಳಸಿಕೊಳ್ಳಲಾಗಿದೆ ಎಂದು ಚಿತ್ರತಂಡ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.