ಜಲಂಧರ್: ‘ಜಾಟ್’ ಸಿನಿಮಾದಲ್ಲಿ ಕ್ರಿಶ್ಚಿಯನ್ನರ ಧಾರ್ಮಿಕ ಭಾವನೆಗೆ ಧಕ್ಕೆ ಮಾಡಲಾಗಿದೆ ಎಂಬ ದೂರಿಗೆ ಸಂಬಂಧಿಸಿದಂತೆ ನಟ ಸನ್ನಿ ದೇವಲ್, ರಣದೀಪ್ ಹೂಡಾ ಮತ್ತು ಇತರ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಏಪ್ರಿಲ್ 10ರಂದು ಬಿಡುಗಡೆಯಾಗಿರುವ ಸಿನಿಮಾ ವಿರುದ್ಧ ಕ್ರಿಶ್ಚಿಯನ್ ಸಮುದಾಯದ ನಾಯಕರೊಬ್ಬರು ದೂರು ನೀಡಿದ್ದರು. ಸಿನಿಮಾದಲ್ಲಿ ಜೀಸಸ್ ಕ್ರಿಸ್ತ ಮತ್ತು ಕ್ರೈಸ್ತ ಧರ್ಮದ ಆಚರಣೆಗಳಿಗೆ ಅಗೌರವ ತೋರಲಾಗಿದೆ ಎಂದು ಅವರು ದೂರಿದ್ದರು.
‘ದೇವಲ್, ಹೂಡಾ ಸೇರಿದಂತೆ ನಿರ್ದೇಶಕ ಗೋಪಿಚಂದ್ ಮತ್ತು ನಿರ್ಮಾಪಕ ನವೀನ್ ಹಾಗೂ ವಿನೀತ್ ಕುಮಾರ್ ಅವರ ವಿರುದ್ಧ ಭಾರತೀಯ ನ್ಯಾಯಸಂಹಿತೆಯ ಸೆಕ್ಷನ್ 299 ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ’ ಎಂದು ಠಾಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.