ADVERTISEMENT

‘ಸರ್ಕಾರು ವಾರಿ ಪಾಟಾ’ ಮೊದಲ ಹಂತದ ಚಿತ್ರೀಕರಣ ಪೂರ್ಣ

ಕೊರೋನಾದಿಂದ ಮುಂದೂಡಲ್ಪಟ್ಟ ಶೂಟಿಂಗ್‌

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2021, 10:47 IST
Last Updated 9 ಫೆಬ್ರುವರಿ 2021, 10:47 IST
‘ಸರ್ಕಾರು ವಾರಿ ಪಾಟಾ’ ಚಿತ್ರದಲ್ಲಿ ಮಹೇಶ್‌ ಬಾಬು– ಟ್ವಿಟರ್‌ ಚಿತ್ರ
‘ಸರ್ಕಾರು ವಾರಿ ಪಾಟಾ’ ಚಿತ್ರದಲ್ಲಿ ಮಹೇಶ್‌ ಬಾಬು– ಟ್ವಿಟರ್‌ ಚಿತ್ರ   

ಪರಶುರಾಮ್ ಪೆತ್ಲ ನಿರ್ದೇಶನದ ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತು ನಟಿ ಕೀರ್ತಿ ಸುರೇಶ್ ಅಭಿನಯದ ‘ಸರ್ಕಾರು ವಾರಿ ಪಾಟಾ’ ಚಿತ್ರದ ಮೊದಲ ಹಂತದ ಶೂಟಿಂಗ್‌ ಮುಕ್ತಾಯವಾಗಿದೆ. ಕೊರೊನಾ ಕಾರಣದಿಂದಾಗಿ ಚಿತ್ರೀಕರಣ ದೀರ್ಘಕಾಲ ಮುಂದೂಡಲ್ಪಟ್ಟಿತ್ತು.

ಮೊದಲ ಹಂತದ ಶೂಟಿಂಗ್‌ ದುಬೈನಲ್ಲಿ ಇತ್ತೀಚೆಗೆ ಮುಗಿದಿದೆ. ಚಿತ್ರದ ಒಂದು ಸ್ಟಿಲ್ನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಮಹೇಶ್‌ ಬಾಬು ಅಭಿಮಾನಿಗಳುಖುಷಿಯಾಗಿದ್ದಾರೆ.

ಶಾರ್ಜಾದ ಮೆಲಿಯಾದಲ್ಲಿ ಸುಂದರ ಐತಿಹಾಸಿಕ ತಾಣಗಳ ಹಿನ್ನೆಲೆಯಲ್ಲಿ ಮಹೇಶ್‌ ಬಾಬು ಅಭಿನಯದ ದೃಶ್ಯವನ್ನು ಚಿತ್ರಿಸಲಾಗಿದೆ. ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್‌ ನಿರ್ಮಿಸುತ್ತಿದೆ. ಜಿಎಂಬಿ ಎಂಟರ್‌ಟೈನ್‌ಮೆಂಟ್ಸ್‌ ಮತ್ತು 14 ರೀಲ್ಸ್‌ ಪ್ಲಸ್‌ ಸಂಸ್ಥೆಗಳು ಜಂಟಿಯಾಘಿ ಈ ಚಿತ್ರ ನಿರ್ಮಿಸುತ್ತಿವೆ. ವೆನ್ನಿಲ್ಲಾ ಕಿಶೋರ್‌ ಮತ್ತು ಸುಬ್ಬರಾಜು ಅವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಎಸ್‌.ಎಸ್‌. ತಮನ್‌ ಅವರ ಸಂಗೀತವಿದೆ. ಮಾಧಿ ಅವರು ಚಿತ್ರದ ಛಾಯಾಗ್ರಾಹಕರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.