ADVERTISEMENT

GATHA VAIBHAVA Teaser: ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’ದ ಟೀಸರ್ ನೋಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಸೆಪ್ಟೆಂಬರ್ 2025, 11:11 IST
Last Updated 29 ಸೆಪ್ಟೆಂಬರ್ 2025, 11:11 IST
<div class="paragraphs"><p>‘ಗತವೈಭವ’</p></div>

‘ಗತವೈಭವ’

   

ಬೆಂಗಳೂರು: ಯುವ ನಟ ದುಶ್ಯಂತ್‌ ಪ್ರಮುಖ ಪಾತ್ರದಲ್ಲಿರುವ ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’ ಚಿತ್ರದ ಟೀಸರ್‌ ಬಿಡುಗಡೆಗೊಂಡಿದ್ದು ಸಾಮಾಜಿಕ ತಾಣಗಳಲ್ಲಿ ಸದ್ದು ಮಾಡುತ್ತಿದೆ.

Servegara Silver Screens ಯೂಟ್ಯೂಬ್‌ ಚಾನಲ್‌ನಲ್ಲಿ ‘ಗತವೈಭವ’ ಟೀಸರ್ ವೀಕ್ಷಣೆಗೆ ಲಭ್ಯವಿದೆ. ದುಶ್ಯಂತ್‌ಗೆ ಆಶಿಕಾ ರಂಗನಾಥ್ ನಾಯಕಿಯಾಗಿದ್ದು, ಚಿತ್ರ ನವೆಂಬರ್ 14ರಂದು ತೆರೆಗೆ ಬರಲಿದೆ.

ADVERTISEMENT

ರೊಮ್ಯಾಂಟಿಕ್ ಲವ್ ಸ್ಟೋರಿ ಜೊತೆಗೆ ಫ್ಯಾಂಟಸಿ ಥ್ರಿಲ್ಲರ್ ಅಂಶಗಳನ್ನು ಗತವೈಭವ ಹೊಂದಿದೆ. ಸುನಿ ಸಿನಿಮಾಸ್ ಸಂಸ್ಥೆಯಡಿ ದೀಪಕ್ ಹಾಗೂ ಸಿಂಪಲ್ ಸುನಿ ಚಿತ್ರ ನಿರ್ಮಾಣ ಮಾಡಿದ್ದಾರೆ.

ವಿಲಿಯಂ ಡೇವಿಡ್ ಛಾಯಾಚಿತ್ರಗ್ರಹಣ, ಜೂಡಾ ಸ್ಯಾಂಡಿ ಸಂಗೀತ ಚಿತ್ರಕ್ಕಿದೆ.

ಚಿತ್ರ ಬಿಡುಗಡೆಯಾದರೆ ಪ್ರಚಾರವಾಗುತ್ತದೆ..!

‘ಗತವೈಭವ ತುಂಬಾ ಗಂಭೀರವಾಗಿ ಮಾಡಿದ ಸಿನಿಮಾ. ನನ್ನ ಬ್ಯಾನರ್‌ನಡಿ ಮಾಡಬೇಕು ಎಂದುಕೊಂಡ ಸಿನಿಮಾವಿದು. ಆದರೆ ದುಶ್ಯಂತ್ ಈ ಪ್ರಾಜೆಕ್ಟ್ ಮಾಡಬೇಕು ಎಂದು ಬರೆದಿತ್ತು ಎನ್ನಿಸುತ್ತದೆ. ನಾಲ್ಕು ಸಿನಿಮಾಗಳನ್ನು ಮಾಡಿದಷ್ಟು ಅನುಭವ ನೀಡಿದೆ. ಕೆಲವು ಸಿನಿಮಾ ಪ್ರಚಾರ ಮಾಡಿ ತೆರೆಗೆ ಬರುತ್ತವೆ. ಈ ಚಿತ್ರ ಬಿಡುಗಡೆಯಾದರೆ ಪ್ರಚಾರವಾಗುತ್ತದೆ. ನಾನು ಪ್ರೇಕ್ಷಕನ ರೀತಿ ಈ‌ ಸಿನಿಮಾಗಾಗಿ ಕಾಯುತ್ತಿದ್ದೇವೆ. ಚಿತ್ರದಲ್ಲಿ ಮನರಂಜನೆ, ‌ಎಮೋಷನ್ ಎಲ್ಲವೂ ಇವೆ’ ಎಂದರು ಸುನಿ.

‘ನೂರು ದಿನಕ್ಕೂ ಹೆಚ್ಚು ಕಾಲ ಶೂಟಿಂಗ್ ಮಾಡಿದ್ದೇವೆ. ಪೋರ್ಚುಗಲ್‌ನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಗ್ರಾಫಿಕ್ ಕಾರಣದಿಂದ ಸಿನಿಮಾ ತಡವಾಯ್ತು. ಚಿತ್ರ ನಿರೀಕ್ಷೆಗೂ‌ ಮೀರಿದಷ್ಟು ಅದ್ಭುತವಾಗಿ ಮೂಡಿ ಬಂದಿದೆ. ಗತವೈಭವವಾಗಿಯೇ ಮೂಡಿಬಂದಿದೆ. ಸುನಿ ಸರ್ ಅವರ ಹತ್ತು ಸಿನಿಮಾಗಳಲ್ಲಿ ಇದು ಅತ್ಯುತ್ತಮ ಸಿನಿಮಾವಾಗಲಿದೆ’ ಎಂದರು ದುಶ್ಯಂತ್‌.

‘ನನಗೆ ಚಿತ್ರದಲ್ಲಿ ನಾಲ್ಕು ಲುಕ್‌ಗಳಿವೆ. ಗತವೈಭವದಲ್ಲಿ ನಟಿಸಿರುವುದು ಬೇರೆಯದ್ದೇ ಅನುಭವ. ತೆರೆಮೇಲೆ ವೈಭವವಾಗಿ ಕಾಣಿಸಲು ಅದ್ಧೂರಿಯಾಗಿ ಚಿತ್ರೀಕರಣ ಮಾಡಲಾಗಿದೆ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡಿದ ಅನುಭವ’ ಎಂದರು ಆಶಿಕಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.