ಮೆಕ್ಸಿಕೊ: ಆಸ್ಕರ್ ಪ್ರಶಸ್ತಿ ಪುರಸ್ಕೃತ, ಖ್ಯಾತ ಹಾಲಿವುಡ್ ನಟ ಜೀನ್ ಹ್ಯಾಕ್‌ಮನ್ (95) ಹಾಗೂ ಅವರ ಪತ್ನಿ ಬೆಟ್ಸಿ ಅರಾಕವಾ (64) ಮೃತಪಟ್ಟಿದ್ದಾರೆ. ಅಮೆರಿಕದ ಮೆಕ್ಸಿಕೊದಲ್ಲಿರುವ ಮನೆಯಲ್ಲಿ ಬುಧವಾರ ಮಧ್ಯಾಹ್ನ ದಂಪತಿಯ ಮೃತದೇಹಗಳು ಪತ್ತೆಯಾಗಿವೆ. ಇದೇ ವೇಳೆ, ಅವರ ಮನೆಯ ನಾಯಿಯ ಶವವೂ ಪತ್ತೆಯಾಗಿದೆ.
ಈ ಸಾವಿಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ. ಪ್ರಾಥಮಿಕ ತನಿಖೆಯ ಪ್ರಕಾರ ಇದು ಕೊಲೆ ಅಲ್ಲ ಎಂದು ಶಂಕಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
‘ಬೋನಿ ಆ್ಯಂಡ್ ಕ್ಲೈಡ್’, ‘ದಿ ಫ್ರೆಂಚ್ ಕನೆಕ್ಷನ್’, ‘ದಿ ಪಸೈಡನ್ ಅಡ್ವೆಂಚರ್’, ‘ಮಿಸಿಸಿಪ್ಪಿ ಬರ್ನಿಂಗ್’, ‘ಅನ್‌ಫರ್‌ಗಿವನ್’ ಹಾಗೂ ‘ಸೂಪರ್‌ಮ್ಯಾನ್’ ಸೇರಿದಂತೆ ಅನೇಕ ಜನಪ್ರಿಯ ಸಿನಿಮಾಗಳಲ್ಲಿ ನಟಿಸಿರುವ ಜೀನ್ ಹ್ಯಾಕ್‌ಮನ್ ಅವರು 40 ವರ್ಷ ಸಿನಿಮಾ ರಂಗದಲ್ಲಿದ್ದರು.
ಐದು ಬಾರಿ ಅಕಾಡೆಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿದ್ದ ಹ್ಯಾಕ್‌ಮನ್ ಅವರಿಗೆ ಎರಡು ಬಾರಿ ಪ್ರಶಸ್ತಿ ಲಭಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.