ಗಣೇಶ್
ಇಂದು (ಜುಲೈ 2) ನಟ ಗಣೇಶ್ ಜನ್ಮದಿನ. ಅವರು ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಕಾರಣ ಅಭಿಮಾನಿಗಳ ಜೊತೆ ಜನ್ಮದಿನವನ್ನು ಆಚರಿಸಲು ಸಾಧ್ಯವಾಗುತ್ತಿಲ್ಲ ಎಂದು ಗಣೇಶ್ ತಿಳಿಸಿದ್ದಾರೆ. ಬದಲಾಗಿ ಅಭಿಮಾನಿಗಳಿಗೆ ತಮ್ಮ ಎಕ್ಸ್‌ಕ್ಲೂಸಿವ್ ಫೋಟೊಗಳ ಗಿಫ್ಟ್ ನೀಡಿದ್ದಾರೆ ಗಣೇಶ್.
ಗಣೇಶ್
‘ಕೃಷ್ಣಂ ಪ್ರಣಯ ಸಖಿ’ ಬೆನ್ನಲ್ಲೇ ಒಪ್ಪಿಕೊಂಡಿದ್ದ ‘ಪಿನಾಕ’ ಚಿತ್ರದ ಚಿತ್ರೀಕರಣದಲ್ಲಿ ಗಣೇಶ್ ತೊಡಗಿಸಿಕೊಂಡಿದ್ದಾರೆ. ಬಿ.ಧನಂಜಯ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ಶೂಟಿಂಗ್ ಬೆಂಗಳೂರಿನ ನೆಲಮಂಗಲದ ಸಮೀಪ ನಡೆಯುತ್ತಿದೆ. ಚಿತ್ರೀಕರಣಕ್ಕಾಗಿ ಆರು ಎಕರೆ ಪ್ರದೇಶದಲ್ಲಿ ಸೆಟ್ ಹಾಕಲಾಗಿದ್ದು, 500 ವರ್ಷಗಳ ಹಿಂದಿನ ದೇವಗಿರಿ ಎಂಬ ಸಾಮ್ರಾಜ್ಯವನ್ನು ಸೃಷ್ಟಿಸಲಾಗಿದೆ. ಇದರ ಜೊತೆಗೆ ರಮೇಶ್ ಅರವಿಂದ್ ಜೊತೆಗಿನ ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಚಿತ್ರದ ಚಿತ್ರೀಕರಣದಲ್ಲೂ ಪಾಲ್ಗೊಳ್ಳುತ್ತಿದ್ದಾರೆ. ಇದರ ನಡುವೆ ಅಭಿಮಾನಿಗಳಿಗಾಗಿ ವಿಶೇಷ ಉಡುಗೊರೆ ನೀಡಿದ್ದಾರೆ. ಹವ್ಯಾಸಿ ಛಾಯಾಗ್ರಾಹಕ ಹಾಗೂ ಪ್ರಸ್ತುತ ಶಿಲ್ಪ ಗಣೇಶ್ ಅವರು ನಿರ್ಮಾಣ ಮಾಡುತ್ತಿರುವ ತುಳು ಚಿತ್ರದ ನಾಯಕ ನಿತ್ಯಪ್ರಕಾಶ್ ಬಂಟ್ವಾಳ ಅವರು ಸೆರೆ ಹಿಡಿದಿರುವ ತಮ್ಮ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.