ADVERTISEMENT

ನಾಲ್ಕು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡ ಹಿಂದಿಯ ‘ರಾಗೀರ್‘

ಪಿಟಿಐ
Published 31 ಆಗಸ್ಟ್ 2021, 8:11 IST
Last Updated 31 ಆಗಸ್ಟ್ 2021, 8:11 IST
ಚಿತ್ರ ಕೃಪೆ: ತಿಲೋತ್ತಮಾ ಶೋಮೆ ಟ್ವಿಟರ್ ಖಾತೆ
ಚಿತ್ರ ಕೃಪೆ: ತಿಲೋತ್ತಮಾ ಶೋಮೆ ಟ್ವಿಟರ್ ಖಾತೆ   

ಕೋಲ್ಕತ್ತ; ಗೌತಮ್ ಘೋಷ್ ನಿರ್ದೇಶನದ ಹಿಂದಿಯ 'ರಾಗೀರ್' ಸಿನಿಮಾ (Raahgir – The Wayfarers) 'ವಾಷಿಂಗ್ಟನ್ ಡಿಸಿ ಸೌತ್ ಏಷಿಯನ್ ಫಿಲ್ಮ್ ಫೆಸ್ಟಿವಲ್'ನ ನಾಲ್ಕು ಪ್ರಶಸ್ತಿಗಳನ್ನು ಪಡೆದಿದೆ.

ಉತ್ತಮ ಫೀಚರ್ ಫಿಲ್ಮ್, ಉತ್ತಮ ನಿರ್ದೇಶಕ, ಉತ್ತಮ ನಟ ಹಾಗೂ ಉತ್ತಮ ನಟಿ ವಿಭಾಗದಲ್ಲಿ 'ರಾಗಿರ್' ಪ್ರಶಸ್ತಿಗಳನ್ನು ಬಾಚಿಕೊಂಡಿದೆ‌. ಅಲ್ಲದೇ ಈ ಚಿತ್ರ ಪ್ರತಿಷ್ಠಿತ ಯುಕೆ ಏಷಿಯನ್ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿಗಳನ್ನು ಕಳೆದ ಜೂನ್‌ನಲ್ಲಿ ಪಡೆದಿತ್ತು.

2019 ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಿದ್ದ ರಾಗಿರ್ ಸಿನಿಮಾದಲ್ಲಿ ನಟ ಆದಿಲ್ ಹುಸೇನ್, ಬಂಗಾಳಿ ನಟಿ ತಿಲೋತ್ತಮ್ ಶೋಮೆ, ನೀರಜ್ ಕಬಿ, ಓಂಕಾರದಾಸ್ ಮಾಣಿಕ್ ಪುರಿ ಅಭಿನಯಿಸಿದ್ದರು.

ADVERTISEMENT

ಗ್ರಾಮೀಣ ಭಾರತದ ಕುಟುಂಬವೊಂದರ ಕಥೆಯನ್ನು ಆಧರಿಸಿರುವ ಈ ಚಿತ್ರ ಅತ್ಯಂತ ಕಷ್ಟಕರ ಸಂದರ್ಭದಲ್ಲಿ ಮಾನವೀಯತೆ ಹೇಗೆ ಅಭಿವ್ಯಕ್ತಿಗೊಳ್ಳುತ್ತದೆ ಎಂಬುದನ್ನು ತೋರಿಸುತ್ತದೆ.

ಇನ್ನು ಪ್ರಶಸ್ತಿ ಪಡೆದಿರುವುದಕ್ಕೆ ನಟಿ ತಿಲೋತ್ತಮಾ ಶೋಮೆ ಅವರು ಟ್ವಿಟರ್‌ನಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಚಿತ್ರಕ್ಕೆ IMDb ಯಲ್ಲಿ 7.5 ರೇಟಿಂಗ್ ಇದೆ. ಗೌತಮ್ ಘೋಷ್ ಅವರು ಒಟ್ಟು ಒಂದು ಡಾಕ್ಯುಮೆಂಟರಿ ಸೇರಿದಂತೆ 24 ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.