ADVERTISEMENT

ಗ್ರಾಮಾಯಣ ಹಾಡು ರಿಲೀಸ್: ವಿನಯ್ ರಾಜ್‌ಕುಮಾರ್ ಜತೆ ಮೇಘಾ ಶೆಟ್ಟಿ ಬೆಂಕಿ ಡ್ಯಾನ್ಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಜನವರಿ 2026, 14:37 IST
Last Updated 17 ಜನವರಿ 2026, 14:37 IST
<div class="paragraphs"><p>ವಿನಯ್ ರಾಜ್‌ಕುಮಾರ್ ಜತೆ ಮೇಘಾ ಶೆಟ್ಟಿ</p></div>

ವಿನಯ್ ರಾಜ್‌ಕುಮಾರ್ ಜತೆ ಮೇಘಾ ಶೆಟ್ಟಿ

   

ಚಿತ್ರ: ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ 

ನಟ ವಿನಯ್ ರಾಜ್‌ಕುಮಾರ್ ಹಾಗೂ ನಟಿ ಮೇಘಾ ಶೆಟ್ಟಿ ನಟನೆಯ ‘ಗ್ರಾಮಾಯಣ’ ಚಿತ್ರದ ‘ಬೆಂಕಿ’ ಲಿರಿಕಲ್ ವಿಡಿಯೊ ಸಾಂಗ್ ಅನ್ನು ಚಿತ್ರತಂಡ ಇಂದು (ಜ.17) ಬಿಡುಗಡೆ ಮಾಡಿದೆ. ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಗ್ರಾಮಾಯಣ ಸಿನಿಮಾದ ಮತ್ತೊಂದು ಹಾಡು ಬಿಡುಗಡೆ ಮಾಡಲಾಗಿದೆ.

ADVERTISEMENT

ವಿನಯ್ ರಾಜ್‌ಕುಮಾರ್ ಜತೆ ಮೇಘಾ ಶೆಟ್ಟಿ

ವಿಶೇಷ ಏನೆಂದರೆ ನಟ ಶಿವ ರಾಜ್‌ಕುಮಾರ್ ಹಾಗೂ ಸುಧಾರಾಣಿ ನಟನೆಯಲ್ಲಿ ಮೂಡಿಬಂದಿದ್ದ ‘ಮನ ಮೆಚ್ಚಿದ ಹುಡುಗಿ’ ಸಿನಿಮಾದ ‘ನಿನ್ನಾಣೆ ನಾನು ಬೆಂಕಿಯಲ್ಲಿ ತಪ್ಪು ಕಂಡೆನು’ ಹಾಡನ್ನು ಇಲ್ಲಿ ರಿಮೇಕ್ ಮಾಡಲಾಗಿದೆ. ಈ ಹಾಡನ್ನು ಕಪಿಲ್ ಕಪಿಲನ್, ಐರಾ ಉಡುಪ ಹಾಡಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಎಸ್‌ವಿ ಸಂಗೀತ ಮತ್ತು ಚಿ ಉದಯಶಂಕರ್ ಸಾಹಿತ್ಯ ಬರೆಯುತ್ತಿದ್ದಾರೆ.

‘ಜೊತೆಜೊತೆಯಲಿ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ಮೇಘಾ ಶೆಟ್ಟಿ ಅವರು ವಿನಯ್ ರಾಜ್‌ಕುಮಾರ್ ಜೊತೆಗೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ‘ತ್ರಿಬಲ್‌ ರೈಡಿಂಗ್‌’, ‘ದಿಲ್‌ಪಸಂದ್‌’ ಸಿನಿಮಾಗಳ ಮೂಲಕ ಚಂದನವನದಲ್ಲಿ ಸದ್ದು ಮಾಡಿದ ನಟಿ ಮೇಘಾ ಶೆಟ್ಟಿ ನಟನೆಯ ‘ಕೈವ’ ಹಾಗೂ ‘After ಆಪರೇಷನ್‌ ಲಂಡನ್‌ ಕೆಫೆ’ ಸಿನಿಮಾಗಳು ಬಿಡುಗಡೆ ಹಂತದಲ್ಲಿವೆ. 

2018ರಲ್ಲೇ ಸೆಟ್ಟೇರಿದ್ದ ‘ಗ್ರಾಮಾಯಣ’ ಸಿನಿಮಾ ಹಲವು ಕಾರಣಗಳಿಂದ ಮಧ್ಯದಲ್ಲೇ ಸ್ಥಗಿತಗೊಂಡಿತ್ತು. ದೇವನೂರು ಚಂದ್ರು ಆ್ಯಕ್ಷನ್‌ ಕಟ್‌ ಹೇಳಿದ್ದ ಈ ಸಿನಿಮಾಗೆ ಇತ್ತೀಚೆಗಷ್ಟೇ ಮರುಜೀವ ಸಿಕ್ಕಿತ್ತು. ನಿರ್ಮಾಪಕ ಕೆ.ಪಿ. ಶ್ರೀಕಾಂತ್‌ ಅವರು ಲಹರಿ ಫಿಲ್ಮ್ಸ್ ಮನೋಹರ್‌ ನಾಯ್ಡು ಜೊತೆಗೂಡಿ ಈ ಪ್ರಾಜೆಕ್ಟ್‌ಗೆ ಮರುಜೀವ ನೀಡಿದ್ದರು.

ಇನ್ನು, ಅಚ್ಯುತ್‌ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್, ಅಪರ್ಣ(ನಿರೂಪಕಿ), ಸೀತಾ ಕೋಟೆ, ಶ್ರೀನಿವಾಸ ಪ್ರಭು, ಮಂಜುನಾಥ್ ಹೆಗೆಡೆ ಮುಂತಾದವರು ತಾರಾಬಳಗ ಈ ಸಿನಿಮಾದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.