ADVERTISEMENT

ವಿಜಯ್ ವರ್ಮಾ ನಟನೆಯ ‘ಗುಸ್ತಾಖ್ ಇಷ್ಕ್’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ನವೆಂಬರ್ 2025, 7:35 IST
Last Updated 12 ನವೆಂಬರ್ 2025, 7:35 IST
   

ನವದೆಹಲಿ: ವಿಜಯ್ ವರ್ಮಾ ಮತ್ತು ಫಾತಿಮಾ ಸನಾ ಶೇಖ್ ಅಭಿನಯಿಸಿರುವ ‘ಗುಸ್ತಾಖ್ ಇಷ್ಕ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಈ ಕುರಿತು ಚಿತ್ರತಂಡ ಮಾಹಿತಿ ನೀಡಿದೆ.

ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ನಿರ್ಮಾಣದ ‘ಗುಸ್ತಾಖ್ ಇಷ್ಕ್’ ಚಿತ್ರವು ಪಂಜಾಬ್, ದೆಹಲಿ ಪ್ರಮುಖ ಕೋಟೆಗಳಲ್ಲಿ ಚಿತ್ರೀಕರಿಸಲಾಗಿದೆ. ಒಬ್ಬ ಯುವಕನು ಸಾಹಿತಿಯಿಂದ ಸಾಹಿತ್ಯವನ್ನು ಕಲಿತು ಕೊನೆಗೆ ಕವಿಯ ಮಗಳನ್ನು ಕವನ, ಕಾವ್ಯದ ಮೂಲಕ ಒಲಿಸಿಕೊಳ್ಳುವ ಚಿತ್ರ ಇದಾಗಿದೆ.

ನವೆಂಬರ್ 28 ‘ಗುಸ್ತಾಖ್ ಇಷ್ಕ್’ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮಾಹಿತಿ ಹೇಳಿದೆ. ಚಿತ್ರದಲ್ಲಿ ನಾಸಿರುದ್ದೀನ್ ಶಾ ಮತ್ತು ಶರೀಬ್ ಹಶ್ಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ADVERTISEMENT

ವಿಭು ಪುರಿ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದರೆ, ಭಾರದ್ವಾಜ್ ಸಂಗೀತ ಸಂಯೋಜಿಸಿದ್ದಾರೆ. ಗುಲ್ಜಾರ್ ಅವರು ಚಿತ್ರಕಥೆ ಬರೆದಿದ್ದು, ಮನುಷ್ ನಂದನ್ ಛಾಯಾಗ್ರಹಣ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.