ADVERTISEMENT

'ಹ್ಯಾಪಿ ಬರ್ತ್‌ಡೇ ಅಮೃತಕ್ಕಾ': ನಟಿಗೆ ಮಸ್ತ್ ಸಾಂಗ್ ಹಾಡಿದ ಕಾಫಿ ನಾಡು ಚಂದು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜುಲೈ 2022, 10:21 IST
Last Updated 27 ಜುಲೈ 2022, 10:21 IST
ಕಾಫಿ ನಾಡು ಚಂದು
ಕಾಫಿ ನಾಡು ಚಂದು   

ಬೆಂಗಳೂರು: ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಸ್ಟಾರ್‌ ಆಗಿರುವ ಕಾಫಿ ನಾಡು ಚಂದು ‘ಬರ್ತಡೇ ಹಾಡು‘ಗಳ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ.

ಪುನೀತಣ್ಣ, ಶಿವಣ್ಣ ಅಭಿಮಾನಿ ಎಂದು ಹೇಳುವ ಕಾಫಿ ನಾಡು ಚಂದು ಅವರು ಚಂದನವನದ ತಾರೆಗಳು ಸೇರಿದಂತೆ ತಮ್ಮ ಪ್ರೀತಿ ಪಾತ್ರರಿಗೆ ಬರ್ತಡೇ ಹಾಡುಗಳನ್ನು ಹೇಳುತ್ತಾರೆ ಈ ಹಾಡುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಚಂದು ಅವರು ಇನ್‌ಸ್ಟಾಗ್ರಾಂನಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಜುಲೈ 26ರಂದು ಜನ್ಮದಿನ ಆಚರಸಿಕೊಂಡ ನಟಿ ಅಮೃತಾ ಅಯ್ಯಂಗಾರ್‌ ಅವರಿಗೂ ವಿಶ್‌ ಮಾಡಿ ಬರ್ತಡೇ ಹಾಡು ಹಾಡಿದ್ದಾರೆ ಕಾಫಿ ನಾಡು ಚಂದು.

ತಮ್ಮ ವಿಶಿಷ್ಟ ಶೈಲಿಯಲ್ಲಿ ಹಾಡಿನ ಮೂಲಕ ಜನ್ಮದಿನಕ್ಕೆ ಶುಭ ಕೋರುವ ಚಂದು ಯುವಕರ ಪಾಲಿಗೆ ಮನರಂಜನೆ ಆಗಿದ್ದಾರೆ. ಸದ್ಯ ಅವರುಸೋಶಿಯಲ್ ಮೀಡಿಯಾಗಳಲ್ಲಿ ಜನಪ್ರಿಯರಾಗಿದ್ದಾರೆ.

ಅವರ ಕೆಲವು ಬರ್ತಡೇ ಹಾಡುಗಳು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.