ADVERTISEMENT

ಸಿನಿಮಾ ನಿರ್ದೇಶಕ ಹ.ಸೂ. ರಾಜಶೇಖರ್‌ ನಿಧನ

ಮುತ್ತಿನ ಹಾರ, ಸಾಂಗ್ಲಿಯಾನ ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದರು

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 13:32 IST
Last Updated 2 ನವೆಂಬರ್ 2019, 13:32 IST
ಹ.ಸೂ.ರಾಜಶೇಖರ್
ಹ.ಸೂ.ರಾಜಶೇಖರ್   

ಬೆಂಗಳೂರು:‘ಕರ್ಫ್ಯೂ’ ಚಿತ್ರದ ನಿರ್ದೇಶಕ ಹ.ಸೂ. ರಾಜಶೇಖರ್‌(69) ಶನಿವಾರ ನಿಧನರಾದರು.

ಮೃತರಿಗೆ ಇಬ್ಬರು ಪುತ್ರರು ಇದ್ದಾರೆ.‘ಸಾಂಗ್ಲಿಯಾನ’, ‘ಮುತ್ತಿನಹಾರ’ ಸಿನಿಮಾಗಳಿಗೆ ಅವರು ಸಹಾಯಕ ನಿರ್ದೇಶಕರಾಗಿ ದುಡಿದಿದ್ದರು. ಅವರು ನಿರ್ದೇಶಿಸಿದ ಮೊದಲ ಚಿತ್ರ ‘ಗಂಧರ್ವ’. ಬಳಿಕ ‘ನಿರ್ಬಂಧ’, ‘ಧೈರ್ಯ’, ‘ಮಿಸ್ಟರ್‌ ಎಕ್ಸ್’, ‘ಗರುಡ’, ‘ಪಾಪಿಗಳ ಲೋಕದಲ್ಲಿ’, ‘ಶಿವರಂಜನಿ’, ‘ಬಣ್ಣದ ಹೆಜ್ಜೆ’, ‘ಭೈರವಿ’ ಸೇರಿದಂತೆ 35 ಕನ್ನಡ ಮತ್ತು 3 ತುಳು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

ಅಂತ್ಯಕ್ರಿಯೆಯು ಭಾನುವಾರ ಮಧ್ಯಾಹ್ನ ಬನಶಂಕರಿಯ ಚಿತಾಗಾರದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.