ADVERTISEMENT

ಹಿಂದಿ ಅವತರಣಿಕೆಯಲ್ಲಿ ₹50 ಕೋಟಿಗೂ ಹೆಚ್ಚು ಹಣ ಬಾಚಿಕೊಂಡ ‘ಪುಷ್ಪ’

ಪಿಟಿಐ
Published 2 ಜನವರಿ 2022, 12:21 IST
Last Updated 2 ಜನವರಿ 2022, 12:21 IST
ಪುಷ್ಪ ಚಿತ್ರದ ಪೋಸ್ಟರ್
ಪುಷ್ಪ ಚಿತ್ರದ ಪೋಸ್ಟರ್   

ಮುಂಬೈ: ತೆಲುಗು ನಟ ಅಲ್ಲು ಅರ್ಜುನ್ – ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ’ ಸಿನಿಮಾ ಹಿಂದಿಯಲ್ಲಿ ₹56.69 ಕೋಟಿ ಗಳಿಸುವ ಮೂಲಕ ಗಲ್ಲಾ ಪೆಟ್ಟಿಗೆಯಲ್ಲಿ ಸಖತ್ ಸದ್ದು ಮಾಡುತ್ತಿದೆ.

ಸುಕುಮಾರ್‌ ಕಥೆ ಮತ್ತು ನಿರ್ದೇಶನದಲ್ಲಿ ಮೂಡಿಬಂದಿರುವ 'ಪುಷ್ಪ' ಬಿಡುಗಡೆಗೂ ಮುನ್ನ ಟ್ರೇಲರ್‌ ಮತ್ತು ಹಾಡುಗಳ ಮೂಲಕ ಸಾಕಷ್ಟು ಸದ್ದು ಮಾಡಿತ್ತು.

ಡಿ.17ರಂದು ಬಿಡುಗಡೆಯಾಗಿರುವ ಈ ಚಿತ್ರವು ಹಿಂದಿ, ಮಲಯಾಳಂ, ತಮಿಳು ಹಾಗೂ ಕನ್ನಡ ಭಾಷೆಗಳಲ್ಲಿ ತೆರೆಕಂಡಿದೆ.

ADVERTISEMENT

ಪುಷ್ಪ ಚಿತ್ರಕ್ಕೆ ಹಾಲಿವುಡ್‌ನ ಸ್ಪೈಡರ್ ಮ್ಯಾನ್ ಮತ್ತು ಬಾಲಿವುಡ್‌ ನಟ ರಣವೀರ್‌ ಸಿಂಗ್ ಅಭಿನಯದ ‘83’ ಚಿತ್ರಗಳು ತೀವ್ರ ಪೈಪೋಟಿ ನೀಡುತ್ತಿವೆ.

ವಿಶ್ವದಾದ್ಯಂತ ತೆರೆಕಂಡಿರುವ ಪುಷ್ಪ ಸಿನಿಮಾ ಶನಿವಾರದ ವೇಳೆ ₹300 ಕೋಟಿಗೂ ಹೆಚ್ಚು ಹಣ ಗಳಿಸಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.