ADVERTISEMENT

Tom Holland and Zendaya: ಸ್ಪೈಡರ್ ಮ್ಯಾನ್‌ಗೆ ಕೂಡಿ ಬಂತು ವಿವಾಹ ಯೋಗ!

ಸ್ಪೈಡರ್ ಮ್ಯಾನ್ ಖ್ಯಾತಿಯ ಖ್ಯಾತ ಹಾಲಿವುಡ್ ನಟ ಟಾಮ್ ಹೊಲ್ಯಾಂಡ್ ಹಾಗೂ ನಟಿ ಜೆಂಡೆಯಾ ಅವರು ಶೀಘ್ರವೇ ವಿವಾಹ ಆಗಲಿದ್ದಾರೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಜನವರಿ 2025, 7:57 IST
Last Updated 8 ಜನವರಿ 2025, 7:57 IST
<div class="paragraphs"><p>Tom Holland and Zendaya</p></div>

Tom Holland and Zendaya

   

ಬೆಂಗಳೂರು: ಸ್ಪೈಡರ್ ಮ್ಯಾನ್ ಖ್ಯಾತಿಯ ಖ್ಯಾತ ಹಾಲಿವುಡ್ ನಟ ಟಾಮ್ ಹೊಲ್ಯಾಂಡ್ ಹಾಗೂ ನಟಿ ಜೆಂಡೆಯಾ ಅವರು ಶೀಘ್ರವೇ ವಿವಾಹ ಆಗಲಿದ್ದಾರೆ.

ಈ ಜೋಡಿ ಇತ್ತೀಚೆಗೆ ಲಾಸ್‌ ಏಂಜಲೀಸ್‌ನಲ್ಲಿ ನಡೆದ ಗೋಲ್ಡನ್ ಗ್ಲೋಬ್‌ ಕಾರ್ಯಕ್ರಮದಲ್ಲಿ ಪರಸ್ಪರ ಉಂಗುರ ಬದಲಾಯಿಸಿಕೊಂಡಿದೆ.

ADVERTISEMENT

2021 ರಿಂದ ಟಾಮ್ ಹೊಲ್ಯಾಂಡ್ ಹಾಗೂ ನಟಿ ಜಂಡಿಯಾ ಅವರು ಡೇಟಿಂಗ್‌ನಲ್ಲಿದ್ದರು. ಕದ್ದು ಮುಚ್ಚಿ ಪ್ರೀತಿ ಮಾಡುತ್ತಿದ್ದರು. ಆದರೆ, ಬಹಿರಂಗಪಡಿಸಿರಲಿಲ್ಲ.

2017 ರಲ್ಲಿ ತರೆ ಕಂಡ ಸ್ಪೈಡರ್ ಮ್ಯಾನ್ ಹೋಂ ಕಮಿಂಗ್, 2019ರ ಸ್ಪೈಡರ್ ಮ್ಯಾನ್: ಫಾರ್ ಫ್ರಮ್ ಹೋಂ ಹಾಗೂ 2021ರ ಸ್ಪೈಡರ್ ಮ್ಯಾನ್: ನೋ ವೇ ಹೋಂ ಸಿನಿಮಾದಲ್ಲಿ ಈ ಇಬ್ಬರು ಒಟ್ಟಾಗಿ ನಟಿಸಿದ್ದರು.

ವಿಶೇಷವೆಂದರೆ ಈ ಇಬ್ಬರಿಗೂ 28 ವರ್ಷ ವಯೋಮಾನ. ಈ ಕುರಿತು ಲಾಸ್‌ ಏಂಜಲೀಸ್ ಟೈಮ್ಸ್ ವರದಿ ಮಾಡಿದೆ.

15ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಜೆಂಡೆಯಾ ಅವರು ಗಾಯಕಿಯೂ ಹೌದು. ಸ್ಪೈಡರ್ ಮ್ಯಾನ್ ಸರಣಿ ಸಿನಿಮಾಗಳಲ್ಲಿ ಟಾಮ್ ಹೊಲ್ಯಾಂಡ್ ಅವರು ಸ್ಪೈಡರ್ ಮ್ಯಾನ್ ಆಗಿ ಜನಪ್ರಿಯ.

Tom Holland and Zendaya

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.