ADVERTISEMENT

‘ಐ ಲವ್‌ ಯು’ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ

​ಪ್ರಜಾವಾಣಿ ವಾರ್ತೆ
Published 7 ಮೇ 2019, 8:42 IST
Last Updated 7 ಮೇ 2019, 8:42 IST
‘ಐ ಲವ್‌ ಯು’ ಚಿತ್ರದಲ್ಲಿ ರಚಿತಾ ರಾಮ್‌ ಮತ್ತು ಉಪೇಂದ್ರ
‘ಐ ಲವ್‌ ಯು’ ಚಿತ್ರದಲ್ಲಿ ರಚಿತಾ ರಾಮ್‌ ಮತ್ತು ಉಪೇಂದ್ರ   

ಆರ್‌. ಚಂದ್ರು ನಿರ್ದೇಶನದ ‘ಐ ಲವ್‌ ಯು’ ಚಿತ್ರಕ್ಕೆ ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಯು/ಎ ಪ್ರಮಾಣ ಪತ್ರ ನೀಡಿದೆ.

ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಈ ಚಿತ್ರ ಬಿಡುಗಡೆಯಾಗಲಿದೆ. ‘ರಿಯಲ್‌ ಸ್ಟಾರ್’ ಉಪೇಂದ್ರ ಅವರಿಗೆ ರಚಿತಾ ರಾಮ್‌ ಮತ್ತು ಸೋನು ಗೌಡ ಸಾಥ್‌ ನೀಡಿದ್ದಾರೆ. ಸದ್ಯ ಉಪ್ಪಿ ಕುಟುಂಬ ಸಮೇತ ಅಮೆರಿಕ ಪ್ರವಾಸದಲ್ಲಿದ್ದಾರೆ.

ಮೇ ತಿಂಗಳಿನಲ್ಲಿಯೇ ಸಿನಿಮಾ ಬಿಡುಗಡೆಗೆ ಈ ಮೊದಲು ಚಿತ್ರತಂಡ ಯೋಚಿಸಿತ್ತು. ಆದರೆ, ಇದೇ 23ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಹಾಗಾಗಿ, ಉಪ್ಪಿ ವಿದೇಶ‍ಪ್ರವಾಸದಿಂದ ಮರಳಿದ ಬಳಿಕ ಬಿಡುಗಡೆಯ ದಿನಾಂಕ ನಿಗದಿಪಡಿಸುವ ಸಾಧ್ಯತೆಯಿದೆ. ಉಪ್ಪಿ ಜೂನ್‌ನಲ್ಲಿ ಜನರ ಮುಂದೆ ‘ಐ ಲವ್‌ ಯು’ ಹೇಳಲು ಬರುವ ನಿರೀಕ್ಷೆಯಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.