ADVERTISEMENT

ಸ್ವಾತಂತ್ರ್ಯೋತ್ಸವಕ್ಕೆ ಟೈಗರ್ ಶ್ರಾಫ್ ವಿನೂತನ ಶೈಲಿಯ 'ಫ್ಲೈಯಿಂಗ್ ಸೆಲ್ಯೂಟ್'

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಆಗಸ್ಟ್ 2021, 9:41 IST
Last Updated 14 ಆಗಸ್ಟ್ 2021, 9:41 IST
ಚಿತ್ರ ಕೃಪೆ: ಟೈಗರ್ ಶ್ರಾಫ್, ಇನ್‌ಸ್ಟಾಗ್ರಾಂ
ಚಿತ್ರ ಕೃಪೆ: ಟೈಗರ್ ಶ್ರಾಫ್, ಇನ್‌ಸ್ಟಾಗ್ರಾಂ   

ಮುಂಬೈ: ದೇಶದೆಲ್ಲೆಡೆ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಇದರಂತೆ ಬಾಲಿವುಡ್ ದಿಗ್ಗಜ ಜಾಕಿ ಶ್ರಾಫ್ ಅವರ ಪುತ್ರ ಹಾಗೂ ನಟ ಟೈಗರ್ ಶ್ರಾಫ್ 'ಫ್ಲೈಯಿಂಗ್ ಸೆಲ್ಯೂಟ್' ಮೂಲಕ ವಿನೂತನ ಶೈಲಿಯಲ್ಲಿ ಶುಭಾಶಯ ಸಲ್ಲಿಸಿದ್ದಾರೆ.

ಫಿಟ್‌ನೆಸ್‌ಗೆ ಹೆಚ್ಚಿನ ಮಹತ್ವ ಕೊಡುತ್ತಿರುವ ಟೈಗರ್ಶ್ರಾಫ್, ಫಿಟ್‌ನೆಸ್‌ ಕುರಿತಾದ ವಿಡಿಯೊಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಈಗ ನೂತನ 'ವಂದೇ ಮಾತರಂ' ಹಾಡಿನೊಂದಿಗೆ ಫ್ಲೈಯಿಂಗ್ ಸೆಲ್ಯೂಟ್ ಮಾಡುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಅನೇಕ ಸ್ಟಂಟ್‌ಗಳನ್ನು ಕರಗತ ಮಾಡಿಕೊಂಡಿರುವ ಟೈಗರ್ ಶ್ರಾಫ್, ಜಿಮ್‌ಕೇಂದ್ರದಲ್ಲಿ ಒಂದು ತುದಿಯಿಂದ ಓಡೋಡಿ ಬಂದು ಮೇಲಕ್ಕೆ ಜಿಗಿದು ಗಾಳಿಯಲ್ಲಿ ಪಲ್ಟಿ ಹೊಡೆಯುತ್ತಾ ಸೆಲ್ಯೂಟ್ ನೀಡುತ್ತಾರೆ. ಬಳಿಕ ಸೇಫ್ ಲ್ಯಾಂಡಿಂಗ್ ಪೂರ್ಣಗೊಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.