ADVERTISEMENT

ಇನ್ನೋವೇಟಿವ್ ಇಂಟರ್‌ನ್ಯಾಷನಲ್‌ ಚಿತ್ರೋತ್ಸವ: ಪ್ರಶಸ್ತಿ ಬಾಚಿತು ‘ಡೊಳ್ಳು’

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 10:49 IST
Last Updated 26 ಅಕ್ಟೋಬರ್ 2021, 10:49 IST
‘ಡೊಳ್ಳು’ ಚಿತ್ರಕ್ಕೆ ಸರಸ್ವತಿ ಪಿಂಪ್ಳೆ ಫೌಂಡೇಶನ್ ವತಿಯಿಂದ ದಾದಾಸಾಹೇಬ್ ಫಾಲ್ಕೆ ಉತ್ತಮ ಕನ್ನಡ ಚಿತ್ರ ಪ್ರಶಸ್ತಿ ಲಭಿಸಿದೆ
‘ಡೊಳ್ಳು’ ಚಿತ್ರಕ್ಕೆ ಸರಸ್ವತಿ ಪಿಂಪ್ಳೆ ಫೌಂಡೇಶನ್ ವತಿಯಿಂದ ದಾದಾಸಾಹೇಬ್ ಫಾಲ್ಕೆ ಉತ್ತಮ ಕನ್ನಡ ಚಿತ್ರ ಪ್ರಶಸ್ತಿ ಲಭಿಸಿದೆ   

ಒಡೆಯರ್‌ ಮೂವೀಸ್‌ ಲಾಂಛನದ ಅಡಿ ನಿರ್ಮಾಣವಾದ ಡೊಳ್ಳು ಚಿತ್ರಕ್ಕೆ ಇನ್ನೋವೇಟಿವ್ ಇಂಟರ್‌ನ್ಯಾಷನಲ್‌ ಚಿತ್ರೋತ್ಸವದಲ್ಲಿ ಸರಸ್ವತಿ ಪಿಂಪ್ಳೆ ಫೌಂಡೇಶನ್ ವತಿಯಿಂದ ನೀಡಲಾದ ದಾದಾಸಾಹೇಬ್ ಫಾಲ್ಕೆ ಉತ್ತಮ ಚಲನಚಿತ್ರ ಪ್ರಶಸ್ತಿ ದೊರಕಿದೆ.

ಪವನ್ ಒಡೆಯರ್ ಹಾಗೂ ಅವರ ಪತ್ನಿ ಅಪೇಕ್ಷಾ ಪುರೋಹಿತ್ ಚಿತ್ರದ ನಿರ್ಮಾಪಕರು. ಸಾಗರ್‌ ಪುರಾಣಿಕ್‌ ಈ ಚಿತ್ರದ ನಿರ್ದೇಶಕರು.

ಈ ಚಿತ್ರವು ಅಮೆರಿಕದ ಬೋಸ್ಟನ್‌ನಲ್ಲಿ ನಡೆದ ಕಲೈಡೊಸ್ಕೋಪ್ ಇಂಡಿಯನ್ ಫಿಲಂ ಫೆಸ್ಟಿವಲ್‌ನಲ್ಲಿ ಮೊದಲ ಪ್ರದರ್ಶನ ಕಂಡಿತ್ತು. ಢಾಕಾ ಇಂಟರ್‌ನ್ಯಾಷನಲ್‌ ಫಿಲಂ ಫೆಸ್ಟಿವಲ್ ಹಾಗೂ ಡಲ್ಲಾಸ್‌ನ ದಕ್ಷಿಣ ಏಷ್ಯಾ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

ADVERTISEMENT

ಕಾರ್ತಿಕ್ ಮಹೇಶ್, ನಿಧಿ ಹೆಗಡೆ, ಚಂದ್ರ ಮಯೂರ, ಬಾಬು ಹಿರಣ್ಣಯ್ಯ, ಶರಣ್ಯ ಸುರೇಶ್, ಡಾ.ಪ್ರಭುದೇವ, ವರುಣ್ ಶ್ರೀನಿವಾಸ್, ಚಂದ್ರಮನು ನಟಿಸಿದ್ದಾರೆ.

ಅಭಿಲಾಷ್ ಕಳತ್ತಿ -ಛಾಯಾಗ್ರಹಣ, ಎಂ ಅನಂತ್ ಕಾಮತ್ - ಸಂಗೀತ ಸಂಯೋಜನೆ, ಬಿ.ಎಸ್.ಕೆಂಪರಾಜು - ಸಂಕಲನ, ಶ್ರೀನಿಧಿ ಡಿ.ಎಸ್ - ಚಿತ್ರಕಥೆ ಮತ್ತು ಸಂಭಾಷಣೆ, ದೇವಿ ಪ್ರಕಾಶ್- ಕಲೆ ನಿತಿನ್ ಲೂಕೋಸ್ - ಶಬ್ದ ವಿನ್ಯಾಸ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.