ADVERTISEMENT

ಶ್ರೇಷ್ಠ ನಟನೆಯ ‘ಇರೋದೊಂದು ಜೀವನ’ ಸಿನಿಮಾಕ್ಕೆ ಮುಹೂರ್ತ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 0:01 IST
Last Updated 10 ಸೆಪ್ಟೆಂಬರ್ 2025, 0:01 IST
ಶ್ರೇಷ್ಠ, ನಂದು ರಾಜ್‌ 
ಶ್ರೇಷ್ಠ, ನಂದು ರಾಜ್‌    

‘ಸೋಮು ಸೌಂಡ್‌ ಇಂಜಿನಿಯರ್‌’ ಸಿನಿಮಾ ಖ್ಯಾತಿಯ ನಟ ಶ್ರೇಷ್ಠ ನಟನೆಯ ಹೊಸ ಸಿನಿಮಾ ‘ಇರೋದೊಂದು ಜೀವನ’ದ ಮುಹೂರ್ತ ಇತ್ತೀಚೆಗೆ ನಡೆಯಿತು. ನಟ ನವೀನ್‌ ಶಂಕರ್‌ ಕ್ಲ್ಯಾಪ್‌ ಮಾಡಿ ಚಿತ್ರೀಕರಣಕ್ಕೆ ಚಾಲನೆ ನೀಡಿದರು.  

‘ಸಲಗ’ ಸಿನಿಮಾದಲ್ಲಿ ನಟಿಸಿದ್ದ ಶ್ರೇಷ್ಠ ಇದೀಗ ವಿನೂತನ ಪ್ರೇಮಕಥೆಯೊಂದರ ಮೂಲಕ ತೆರೆ ಮೇಲೆ ಬರಲಿದ್ದಾರೆ. ಶ್ರೇಷ್ಠ ಅವರಿಗೆ ಜೋಡಿಯಾಗಿ ನಂದು ರಾಜ್ ಅಭಿನಯಿಸುತ್ತಿದ್ದಾರೆ. ಉದಯ್ ಜಾಗ್ವಾರ್ ಚಿತ್ರದಲ್ಲಿ ಖಳನಾಯಕನ ಪಾತ್ರಕ್ಕೆ ಬಣ್ಣಹಚ್ಚಲಿದ್ದಾರೆ. ಸಿನಿಮಾವನ್ನು ಎಸ್. ಕುಮಾರ್ ನಿರ್ದೇಶಿಸುತ್ತಿದ್ದು, ನವೀನ್ ವಾಸುದೇವ್ ಸಂಗೀತ ಸಂಯೋಜಿಸುತ್ತಿದ್ದಾರೆ. ಧನು ಛಾಯಾಚಿತ್ರಗ್ರಹಣವಿರುವ ಈ ಸಿನಿಮಾವನ್ನು ಎಲ್. ನಾಗಭೂಷಣ್ ನಿರ್ಮಿಸಲಿದ್ದಾರೆ. ಚಿತ್ರೀಕರಣ ಆರಂಭಿಸಿರುವ ಚಿತ್ರತಂಡ ಎರಡು ಹಂತದಲ್ಲಿ ಚಿತ್ರೀಕರಣ ಮುಗಿಸಿ ಹೊಸ‌ ವರ್ಷದ ಹೊತ್ತಿಗೆ ತೆರೆಗೆ ಬರುವ ಯೋಜನೆ ಹಾಕಿಕೊಂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT