ADVERTISEMENT

ಕುಂಭಮೇಳದಲ್ಲಿ ಭಾಗವಹಿಸಿದ್ದು ನನ್ನ ಅದೃಷ್ಟ: ಸಂಗಮದಲ್ಲಿ ಮಿಂದೆದ್ದ ನಟ ವಿಕ್ಕಿ

ಪಿಟಿಐ
Published 14 ಫೆಬ್ರುವರಿ 2025, 5:21 IST
Last Updated 14 ಫೆಬ್ರುವರಿ 2025, 5:21 IST
ವಿಕ್ಕಿ ಕೌಶಲ್
ವಿಕ್ಕಿ ಕೌಶಲ್   

ಮಹಾಕುಂಭ ನಗರ; ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಬಾಲಿವುಡ್‌ ನಟ ವಿಕ್ಕಿ ಕೌಶಲ್‌ ಭಾಗಿಯಾಗಿ, ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಬಹಳ ದಿನಗಳಿಂದ ಇಲ್ಲಿಗೆ ಬರಬೇಕೆಂದು ಅಂದುಕೊಂಡಿದ್ದೆ. ಈಗ ಕಾಲ ಕೂಡಿಬಂದಿದೆ. ಇಲ್ಲಿ ಪಾಸಿಟಿವ್ ಎನರ್ಜಿ ಇದೆ. ಕುಂಭಮೇಳದಲ್ಲಿ ಭಾಗವಹಿಸಿದ್ದು ನನ್ನ ಅದೃಷ್ಟ' ಎಂದು ತಿಳಿಸಿದ್ದಾರೆ.

ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಛಾವಾ‘ ಚಿತ್ರ ಇಂದು (ಶುಕ್ರವಾರ) ಬಿಡುಗಡೆಯಾಗಿದೆ.

ADVERTISEMENT

'ಛಾವಾ' ಚಿತ್ರತಂಡ ಅಮೃತಸರದ ಗೋಲ್ಡನ್ ಟೆಂಪಲ್, ಶಿರಡಿ ಸಾಯಿಬಾಬಾ ದೇವಸ್ಥಾನ ಮತ್ತು ಎಲ್ಲೋರಾ ಗುಹೆಗಳ ಬಳಿಯ 12ನೇ ಶಿವ ಜ್ಯೋತಿರ್ಲಿಂಗವಾದ ಗೃಷ್ಣೇಶ್ವರ ಜ್ಯೋತಿರ್ಲಿಂಗ ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು,

‘ಛಾವಾ‘ ಚಿತ್ರದಲ್ಲಿ ಕೌಶಲ್ ಮರಾಠಾ ಯೋಧ ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ಹಾಗೂ ರಶ್ಮಿಕಾ ಮಂದಣ್ಣ ಅವರ ಪತ್ನಿ ಮಹಾರಾಣಿ ಯೇಸುಬಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಲಕ್ಷ್ಮಣ್ ಉಟೇಕರ್ ನಿರ್ದೇಶನವಿದ್ದು, ಮ್ಯಾಡಾಕ್ ಫಿಲ್ಮ್ಸ್ ನಿರ್ಮಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.