ADVERTISEMENT

ಸಿನಿಮಾಗಳಲ್ಲಿ ಗ್ರಾಫಿಕ್ಸ್ ಬಳಕೆ, ಸಾಹಸ ದೃಶ್ಯಗಳು ವಾಸ್ತವಕ್ಕೆ ದೂರ; ಜಾಕಿ ಚಾನ್

ಪಿಟಿಐ
Published 12 ಮೇ 2025, 10:19 IST
Last Updated 12 ಮೇ 2025, 10:19 IST
<div class="paragraphs"><p>ಜಾಕಿ ಚಾನ್</p></div>

ಜಾಕಿ ಚಾನ್

   

ರಾಯಿಟರ್ಸ್‌

ಲಾಸ್ ಏಂಜಲೀಸ್: ಇತ್ತೀಚಿನ ಹಾಲಿವುಡ್ ಸಿನಿಮಾಗಳಲ್ಲಿ ಸಾಹಸಮಯ ದೃಶ್ಯಗಳ ಚಿತ್ರೀಕರಣ ವಾಸ್ತವಕ್ಕೆ ದೂರವಾಗಿದೆ. ಎಲ್ಲವೂ ಕಂಪ್ಯೂಟರ್‌ ತಂತ್ರಜ್ಞಾನ (ಸಿಜಿಐ) ಬಳಸಿ ಮಾಡಲಾಗುತ್ತಿದ್ದು, ನೈಜತೆ ಮರೆಯಾಗಿದೆ ಎಂದು ಆ್ಯಕ್ಷನ್‌ ಐಕಾನ್‌ ಜಾಕಿ ಚಾನ್ ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

ಇತ್ತೀಚಿನ ಸಿಜಿಐ ಆಧಾರಿತ ಸಾಹಸ ದೃಶ್ಯಗಳು 'ಹಲಗೆ ಮೇಲಿನ ಕತ್ತಿಯಂತೆ' ಭಾಸವಾಗುತ್ತದೆ. ಏಕೆಂದರೆ ಇದರಿಂದ ಎಷ್ಟು ಸಕಾರಾತ್ಮಕ ಅಂಶಗಳಿವೆಯೇ ಅಷ್ಟೇ ನಕಾರಾತ್ಮಕ ಪರಿಣಾಮಗಳು ಇವೆ ಎಂದು ಚಾನ್ ಹೇಳಿದ್ದಾರೆ.

ಈ ಸಾಹಸಮಯ ದೃಶ್ಯಗಳಲ್ಲಿ ಅಸಾಧಾರಣ ಸಾಹಸಮಯ ಪ್ರದರ್ಶನವನ್ನು ತೆರೆ ಮೇಲೆ ತರುವಲ್ಲಿ ಯಶಸ್ವಿಯಾಗಿದ್ದರೂ, ನೈಜತೆಯಿಂದ ಕೂಡಿರುವುದಿಲ್ಲ. ಇದು ವಾಸ್ತವಕ್ಕೆ ದೂರವಾದದ್ದು. ಈ ರೀತಿಯ ತಂತ್ರಜ್ಞಾನದಲ್ಲಿ ಕಲಾವಿದರಿಗೆ ಅಪಾಯ ಪರಿಸ್ಥಿತಿಗಳು ಕಡಿಮೆ ಎದುರಾಗುತ್ತದೆ. ಆದರೆ ನಮ್ಮ ಕಾಲದಲ್ಲಿ ಜಿಗಿ ಎಂದರೆ ಯೋಚನೆ ಮಾಡದೆಯೇ ಜಿಗಿಯುತ್ತಿದ್ದೆವು ಎಂದು ಚಾನ್ ಅಭಿಪ್ರಾಯಪಟ್ಟಿದ್ದಾರೆ.

'ನಾನು ಮಾಡಿದಂತೆ ಸಾಹಸಗಳನ್ನು ಮಾಡಲು ಪ್ರಯತ್ನಿಸಿ, ತಮ್ಮ ಪ್ರಾಣವನ್ನೇ ಪಣಕ್ಕಿಡುವುದನ್ನು ನಾನು ಪ್ರೋತ್ಸಾಹಿಸುವುದಿಲ್ಲ. ಏಕೆಂದರೆ ಅದು ನಿಜವಾಗಿಯೂ ತುಂಬಾ ಅಪಾಯಕಾರಿ' ಎಂದು 71 ವರ್ಷದ ನಟ ಹೌಟ್ ಲಿವಿಂಗ್ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

'ಡ್ರಂಕನ್ ಮಾಸ್ಟರ್', 'ಪೊಲೀಸ್ ಸ್ಟೋರಿ' ಮತ್ತು 'ರಶ್ ಅವರ್' ಸೇರಿದಂತೆ ಆಕ್ಷನ್ ಸಿನಿಮಾಗಳಲ್ಲಿ ನಟಿಸಿರುವ ಚಾನ್, ಸಾಹಸ ಪ್ರದರ್ಶನಗಳನ್ನು ಅವರ ಜೀವನದ ಭಾಗವಾಗಿಸಿಕೊಂಡಿದ್ದಾರೆ. ಇದೇ ಅವರ ಗುರುತಿಗೆ ಕಾರಣವಾಗಿದೆ. 'ನನಗೆ ಸಾಧ್ಯವಾದಷ್ಟು ದಿನಗಳವರೆಗೂ ಸಾಹಸಮಯ ಪ್ರದರ್ಶನ ನೀಡುತ್ತೇನೆ' ಎಂದು ಭರವಸೆಯ ಮಾತುಗಳನ್ನು ಚಾನ್‌ ಆಡಿದ್ದಾರೆ.

ಮುಂಬರುವ ಚಿತ್ರ 'ಕರಾಟೆ ಕಿಡ್: ಲೆಜೆಂಡ್ಸ್' ನಲ್ಲಿ ರಾಲ್ಫ್ ಮ್ಯಾಚಿಯೊ ಮತ್ತು ಬೆನ್ ವಾಂಗ್ ಅವರೊಂದಿಗೆ ಚಾನ್‌ ಕಾಣಿಸಿಕೊಳ್ಳಲಿದ್ದಾರೆ. ಮೇ 30ರಂದು ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.